ಉತ್ತರ ಕೊರಿಯಾದ ಉದ್ಧಟತನಕ್ಕೆ ಜಂಟಿ ಸಮರಾಭ್ಯಾಸದ ಮೂಲಕ ಅಮೆರಿಕ-ದಕ್ಷಿಣ ಕೊರಿಯಾ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ವಾರಗಳ ಅವಧಿಯಲ್ಲಿ ಉತ್ತರ ಕೊರಿಯಾ ಆರು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿ ಉದ್ಧಟತನ ಮೆರೆದಿದೆ. ಕಿಮ್‌ಗೆ ತಿರುಗೇಟು ನೀಡಲು ನಿರ್ಧರಿಸಿದ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಇದೀಗ ಜಂಟಿ ಸಮರಾಭ್ಯಾಸದ ಮೂಲಕ ತಕ್ಕ ಉತ್ತರ ನೀಡುತ್ತಿದೆ. ಅಮೆರಿಕ ಪರಮಾಣು-ಚಾಲಿತ ವಾಹಕ USS ರೊನಾಲ್ಡ್ ರೇಗನ್ ಮತ್ತು ದಕ್ಷಿಣ ಕೊರಿಯಾದ ಯುದ್ಧನೌಕೆಗಳು ಕೊರಿಯನ್ ಪೆನಿನ್ಸುಲಾದ ಪೂರ್ವ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರದಲ್ಲಿ ಎರಡು ದಿನಗಳ ಕಾಲ ಯುದ್ಧ ಕಸರತ್ತು ನಡೆಸಲಿವೆ.

ಯುಎಸ್ ಮತ್ತು ದಕ್ಷಿಣ ಕೊರಿಯಾವನ್ನು ತಮ್ಮ ದೇಶದ ಮೇಲೆ ಆಕ್ರಮಣ ಮಾಡಲು ಮಿಲಿಟರಿ ತಂತ್ರಗಳನ್ನು ನಡೆಸುತ್ತಿದೆ ಎಂದು ಉತ್ತರ ಕೊರಿಯಾ ಆರೋಪಿಸುತ್ತಿರುವುದು ತಿಳಿದಿರುವ ವಿಷಯವೇ. ಆದರೆ ಇದನ್ನು ತಳ್ಳಿ ಹಾಕಿರುವ ದಕ್ಷಿಣ ಕೊರಿಯಾ, ತಮ್ಮ ಮಿತ್ರರಾಷ್ಟ್ರಗಳ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಈ ಕಸರತ್ತು ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕೊರಿಯಾ ಮತ್ತೆ ಉದ್ಧಟತನ ತೋರಿಸಿದರೆ ಅದರ ವಿರುದ್ಧ ಸೆಟೆದು ನಿಲ್ಲಲು ನಾವು ತಯಾರಿದ್ದೇವೆ ಎಂದು ತಿಳಿಸಿದರು.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮತ್ತೊಮ್ಮೆ ಸಮರಭ್ಯಾಸ ನಡೆಸುತ್ತಿರುವುದರಿಂದ ಉತ್ತರ ಕೊರಿಯಾ ಹಿಂದೆ ಸರಿಯದೆ ಇನ್ನಷ್ಟು ಕ್ಷಿಪಣಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕೈಗೊಂಡಿರುವ ಹೊಸ ತಂತ್ರಗಳು ಕೊರಿಯನ್ ಪರ್ಯಾಯ ದ್ವೀಪದ ಸ್ಥಿರತೆಗೆ ಧಕ್ಕೆ ತಂದಿವೆ ಎಂದು ಉತ್ತರ ಕೊರಿಯಾ ಹೇಳಿಕೆ ನೀಡಿದೆ.

ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಈಗಾಗಲೇ ಸಭೆ ನಡೆಸಿ ಈ ಕುರಿತು ಚರ್ಚೆ ನಡೆಸಿದೆ. ಉತ್ತರ ಕೊರಿಯಾದ ಕ್ರಮಗಳಿಗೆ ನಾವು ಬಲವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದರು. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಗೆ ಅಮೆರಿಕ ಕರೆ ನೀಡಿದೆ. ಇನ್ನೊಂದೆಡೆ ಜಪಾನ್-ದಕ್ಷಿಣ ಕೊರಿಯಾ ಕೂಡ ನಿನ್ನೆ ಸೇನಾ ಸಮರಾಭ್ಯಾಸ ನಡೆಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!