ಸೌತ್ VS ಬಾಲಿವುಡ್: ಎಲ್ಲರನ್ನೂ ಗೌರವಿಸಿ ಎಂದ ಯಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತವೆ. ಇತ್ತ ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಮೂಡಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲ ಅಭಿಮಾನಿಗಳು ಸೌತ್ ಸಿನಿಮಾಗಳನ್ನು ಹೊಗಳುತ್ತಾ ಬಾಲಿವುಡ್‌ನ್ನು ತೆಗಳಿದ್ದಾರೆ.

ಈ ಬಗ್ಗೆ ಯಶ್ ನಿಲುವು ತೆಗೆದುಕೊಂಡಿದ್ದು, ಎಲ್ಲರನ್ನೂ, ಎಲ್ಲಾ ಇಂಡಸ್ಟ್ರಿಯನ್ನು ಗೌರವಿಸಿ ಎಂದು ಸಲಹೆ ನೀಡಿದ್ದಾರೆ. ಸೌತ್, ಬಾಲಿವುಡ್ ಎನ್ನುವ ಬೇಧ ಈಗಿಲ್ಲ, ಎಲ್ಲಾ ಸಿನಿಮಾಗಳು ಒಂದೆ. ಭಾರತೀಯ ಸಿನಿಮಾ ಎಂದು ಹೇಳಬೇಕು ಎಂದಿದ್ದಾರೆ.

ನಮ್ಮ ಸಿನಿಮಾಗಳೂ ಫ್ಲಾಪ್ ಆಗಿವೆ, ಏನೂ ಇಲ್ಲದೆ ಬಂದವರ ಕೈಯಲ್ಲಿ ಇಂದು ಎಲ್ಲಾ ಇದೆ. ಹೀಗಿರುವಾಗ ಮೇಲೆ ಬಂದು ಎಲ್ಲವನ್ನೂ ಮರೆಯಬಾರದು. ಎಲ್ಲದಕ್ಕೂ ಗೌರವ ಕೊಡಬೇಕಾದ್ದು ನಮ್ಮ ಧರ್ಮ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!