ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ನಾನು ಗೆಲುವು ಸಾಧಿಸಲಿದ್ದೇನೆ: ಅಭ್ಯರ್ಥಿ ರವಿಶಂಕರ್ ವಿಶ್ವಾಸ

ಹೊಸ ದಿಗಂತ ವರದಿ, ಮೈಸೂರು:

ಮಂಡ್ಯ, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದಾಗ, ಕಳೆದ ಬಾರಿ ಅಲ್ಪ ಮತಗಳ ಅಂತರದಿoದ ಸೋತಿರುವುದಕ್ಕೆ ಮತದಾರರು ಅನುಕಂಪ ವ್ಯಕ್ತಪಡಿಸಿ, ಈ ಬಾರಿ ನಿಮಗೆ ಮತ ನೀಡುವುದಾಗಿ ನನಗೆ ಭರವಸೆ, ವಾಗ್ದಾನ ಮಾಡಿದ್ದಾರೆ. ಅಲ್ಲದೇ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರು ಸಂಘಟಿತ ಪ್ರಯತ್ನ ಮಾಡಿ ಮತದಾರರ ಮನಸ್ಸು ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ನಾನು ಗೆಲುವು ಸಾಧಿಸಲಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿಯ ಚುನಾವಣೆಯಲ್ಲಿ ನಾನು ಇಡೀ ಕ್ಷೇತ್ರದ್ಯಾಂತ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದ್ದೆ, ಆದರೆ ಗೆಲುವಿನ ಸಮೀಪಕ್ಕೆ ಬಂದು ಕೇವಲ 183 ಮತಗಳ ಅಂತರದಿoದ ಸೋತಿದ್ದೆ. ಆದರೂ ಕೂಡ ಕ್ಷೇತ್ರದ ಮತದಾರರೊಂದಿಗೆ ನಿರಂತರವಾಗಿ ಒಡನಾಟವನ್ನು ಹೊಂದಿರುವುದರಿoದ ನನ್ನ ಪರಿಚಯ ಪ್ರತಿಯೊಬ್ಬ ಮತದಾರರಿಗೂ ಇದೆ. ನಾಲ್ಕು ಜಿಲ್ಲೆಗಳನ್ನು ಕ್ಷೇತ್ರ ಒಳಗೊಂಡಿರುವುದರಿoದ ಪ್ರತಿಯೊಬ್ಬ ಮತದಾರರನ್ನು ನಾನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದಿದ್ದರೂ, ಇಲ್ಲಿಯ ತನಕ 60 ಸಾವಿರಕ್ಕೂ ಹೆಚ್ಚು ಮತದಾರರನ್ನು ಖುದ್ದಾಗಿ ಭೇಟಿ ಮಾಡಿ ಮತಯಾಚನೆ ಮಾಡಿದ್ದೇನೆ. ಪ್ರತಿಯೊಬ್ಬರು ಕೂಡ ಕಳೆದ ಬಾರಿಯ ಚುನಾವಣೆಯಲ್ಲಿಯೇ ನೀವು ಗೆಲ್ಲಬೇಕಾಗಿತ್ತು. ಆದರೆ ಅತ್ಯಲ್ಪ ಮತಗಳಿಂದ ಸೋತಿದ್ದೀರಿ ಎಂದು ಅನುಕಂಪಪಡಿಸಿ, ಈ ಬಾರಿ ನಿಮಗೆ ಖಂಡಿತವಾಗಿ ನಾವು ಮೊದಲ ಪ್ರಾಶಸ್ತö್ಯ ಮತಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ, ನನ್ನ ಪರವಾಗಿ ಮತಯಾಚನೆ ಮಾಡಿದಾಗ, ಮತ ನೀಡುವ ಭರವಸೆಯನ್ನು ಮತದಾರರು ನೀಡಿದ್ದಾರೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನನಗೆ ವರದಾನವಾಗುತ್ತಿವೆ. ಅತಿಥಿ ಉಪನ್ಯಾಸಕರು ಗೌರವಯುತವಾಗಿ ಬದುಕು ಸಾಗಿಸುವಂತೆ ಮಾಡಲು ರಾಜ್ಯ ಸರ್ಕಾರ ಅವರ ವೇತನವನ್ನು 32 ಸಾವಿರರೂಗೆ ಏರಿಕೆ ಮಾಡಿದೆ. ಅಲ್ಲದೇ ಸೇವಾವಧಿಯನ್ನು ಹೆಚ್ಚಿಸುವ ಮೂಲಕ ಅವರನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ದೈಹಿಕ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚುನಾವಣೆ ಮುಗಿದ ಬಳಿಕ ಕ್ರಮವಹಿಸಲಿದೆ. ಪಾಲಿಟೆಕ್ನಿಕ್, ಇಂಜಿನಿಯರಿ0ಗ್ ಕಾಲೇಜ್‌ಗಳ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿದೆ. 15 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಚಾಲನೆ ನೀಡಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಅಲ್ಲದೇ ರಾಷ್ಟಿಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿದೆ. ಇದರಿಂದಾಗಿ ಶಿಕ್ಷಕರ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿದೆ. ರಾಜ್ಯ ಸರ್ಕಾರ ಯುವ ಸಮೂಹದ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲೂ ಉದ್ಯೋಗ ಮೇಳವನ್ನು ನಡೆಸಿಕೊಂಡು ಬಂದು ಸಾವಿರಾರು ಮಂದಿಗೆ ಉದ್ಯೋಗ ಸಿಗುವಂತೆ ಮಾಡಿದೆ. ಕೇಂದ್ರ-ರಾಜ್ಯ ಸರ್ಕಾರಿ ನೌಕರರ ನಡುವೆ ಇರುವ ವೇತನ ತಾರತಮ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ವೇತನ ಆಯೋಗವನ್ನು ಕೂಡ ರಚಿಸಿದೆ. ಆಯೋಗ ವರದಿ ನೀಡಿದ ಬಳಿಕ ಆ ಬಗ್ಗೆ ಕ್ರಮ ಕೈಗೊಳ್ಳಲಿದೆ. ರಾಜ್ಯ ಸರ್ಕಾರ ಪದವೀಧರ ಮತದಾರರ ಸಮಸ್ಯೆಗಳನ್ನು ನಿವಾರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದು ಮತದಾರರಿಗೆ ಸಮಾಧಾನ ಹಾಗೂ ಸಂತಸವನ್ನು0ಟು ಮಾಡಿದೆ. ಹಾಗಾಗಿ ಮತದಾರರ ಒಲವು ನನ್ನ ಪರವಾಗಿ ಹೆಚ್ಚಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಮತದಾರರಿಗೆ ತಲುಪಿವೆ. ಅದರಿಂದಲೂ ಮತದಾರರು ಖುಷಿಯಾಗಿದ್ದಾರೆ. ಅಲ್ಲದೇ ಯುವ ಸಮೂಹಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿ, ಅವರನ್ನು ಉದ್ಯಮಿಗಳು, ಉದ್ಯೋಗಿಗಳನ್ನಾಗಿ ಮಾಡಿ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಯುವ ಸಮೂಹದ ಮತದಾರರು ಸಂತಸವಾಗಿದ್ದಾರೆ. ಹಾಗಾಗಿ ಅವರು ಕೂಡ ನನಗೆ ಸಾಮೂಹಿಕವಾಗಿ ಮತದಾನ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಮಂಡ್ಯ, ಹಾಸನ ಜಿಲ್ಲೆಗಳಲ್ಲೂ ಮತದಾರರು ನನಗೆ ಅಭೂತಪೂರ್ವವಾಗಿ ಸ್ಪಂದಿಸುತ್ತಿದ್ದಾರೆ. ಈ ಬಾರಿ ನಿಮಗೆ ನಮ್ಮ ಮತ ನೀಡುತ್ತೇವೆ, ನಿಮಗೆ ಒಳ್ಳೆಯದಾಗುತ್ತೆ ಎಂದು ಮತದಾರರು ನನಗೆ ಭರವಸೆ ನೀಡುತ್ತಿದ್ದಾರೆ. ಹಾಗಾಗಿ ಈ ಎರಡೂ ಜಿಲ್ಲೆಗಳಲ್ಲೂ ಕೂಡ ಹೆಚ್ಚಿನ ಮತಗಳು ನನಗೆ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ವಾಣೀಶ್ ಕುಮಾರ್, ಸೋಮಸುಂದರ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಯೋಗಾನಂದ್, ಮೈಸೂರು ನಗರ ವಕ್ತಾರ ಎಂ.ಎ.ಮೋಹನ್, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಕೇಬಲ್ ಮಹೇಶ್, ಗ್ರಾಮಾಂತರ ಸಹ ವಕ್ತಾರ ವಸಂತ್ ಕುಮಾರ್, ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!