ಗುರುವಾರ ನೈಋತ್ಯ ಮುಂಗಾರು ಕೇರಳಕ್ಕೆ ಎಂಟ್ರಿ, ರಾಜ್ಯದಲ್ಲೂ ಇನ್ನೆರಡು ದಿನ ಭಾರೀ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಜನರು ಮಳೆಗಾಲಕ್ಕಾಗಿ ಕಾಯ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದೆ. ನೈರುತ್ಯ ಮುಂಗಾರು ಕೊನೆಗೂ ಚುರುಕುಗೊಂಡಿದ್ದು, ಗುರುವಾರ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಕೇರಳ ಪ್ರವೇಶದ ಬಳಿಕ ಎರಡು ದಿನದಲ್ಲಿ ಮುಂಗಾರು ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಪ್ರವೇಶಕ್ಕೆ ಅಗತ್ಯವಿರುವ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ತಿಳಿಸಿದ್ದಾರೆ. ಗಾಳಿಯ ದಿಕ್ಕು, ವೇಗ ಹಾಗೂ ವಾತಾವರಣದಲ್ಲಿನ ವಿವಿಧ ಅಂಶಗಳು ಮುಂಗಾರು ಮುಂದುವರಿಯಲು ನೆರವಾಗುತ್ತಿವೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಮುಂಗಾರು … Continue reading ಗುರುವಾರ ನೈಋತ್ಯ ಮುಂಗಾರು ಕೇರಳಕ್ಕೆ ಎಂಟ್ರಿ, ರಾಜ್ಯದಲ್ಲೂ ಇನ್ನೆರಡು ದಿನ ಭಾರೀ ಮಳೆ