ಸ್ಪೇಸ್‌ಎಕ್ಸ್ ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದ ನಾಲ್ವರು ಗಗನಯಾತ್ರಿಗಳು ಶುಕ್ರವಾರ ಮಧ್ಯರಾತ್ರಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ.
ಭಾರತೀಯ ಮೂಲದ ರಾಜಾಚಾರಿ ಸೇರಿದಂತೆ ಮೂರು ಅಮೆರಿಕ ಗಗನಯಾತ್ರಿಗಳು ಹಾಗೂ ಒಬ್ಬ ಜರ್ಮನ್ ಗಗನಯಾತ್ರಿ ಅಮೆರಿಕದ ಫ್ಲೋರಿಡಾ ಕರಾವಳಿ ಸಮೀಪ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ.
ಈ ಗಗನಯಾತ್ರಿಗಳು ಕಳೆದ ಆರು ತಿಂಗಳುಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಗುರುವಾರ ಬಾಹ್ಯಾಕಾಶ ನಿಲ್ದಾಣದಲ್ಲಿ ನಮ್ಮ ನಿರ್ಗಮನದಿಂದ ಬೇಸರದ ವಾತಾವರಣವಿತ್ತು. ಅಲ್ಲಿ ಉಳಿದಿರುವ ಏಳು ಗಗನಯಾತ್ರಿಗಳನ್ನು ನಮ್ಮನ್ನು ಅಪ್ಪಿಕೊಂಡು ಬೀಳ್ಕೊಟ್ಟರು. ನಮ್ಮ ಆರು ತಿಂಗಳ ಮಿಷನ್‌ನ ಅಂತ್ಯವಾಗಿದೆ, ಆದರೆ ಬಾಹ್ಯಾಕಾಶ ಕನಸು ಜೀವಂತವಾಗಿದೆ ಎಂದು ಗಗನಯಾತ್ರಿ ಮೌರರ್ ಹೇಳಿದ್ದಾರೆ. ಎಲಾನ್‌ ಮಾಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಸಂಸ್ಥೆಯು ಕಳೆದ ಎರಡು ವರ್ಷಗಳಲ್ಲಿ 26 ಜನರನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಿದೆ. ಆ 26ರಲ್ಲಿ ಎಂಟು ಮಂದಿ ಬಾಹ್ಯಾಕಾಶ ಪ್ರವಾಸಿಗರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!