ಉದ್ಯೋಗಸ್ಥ ಮಹಿಳೆಯರಿಗೆ ಮೂರು ದಿನ ʻಮುಟ್ಟಿನ ರಜೆʼ ಘೋಷಿಸಿದ ಸ್ಪೇನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಣ್ಣುಮಕ್ಕಳು ಪ್ರತಿ ತಿಂಗಳ ಐದು ದಿನಗಳ ಕಾಲ ಋತುಚಕ್ರದ ನೋವಿನಿಂದ ಬಳಲುತ್ತಿರುತ್ತಾರೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಮಾನಸಿಕ ಹಾಗೂ ದೈಹಿಕ ಕಿರಿಕಿರಿ ತಪ್ಪಿದ್ದಲ್ಲ. ಇದರಿಂದ ಹೊರಬರಲು ಸ್ಪೇನ್‌ ಒಂದೊಳ್ಳೆ ನಿರ್ಧಾರವನ್ನು ಪ್ರಕಟಿಸಿದೆ. ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳ ಮೂರು ದಿನಗಳ ಕಾಲ ʻಮುಟ್ಟಿನ ರಜೆʼ ನೀಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯನ್ನು ಮುಂದಿನ ವಾರ ಸ್ಪೇನ್‌ ಸರ್ಕಾರವು ಅನುಮೋದಿಸಲಿದೆ. ಈ ಮೂಲಕ ಋತುಚಕ್ರದ ರಜೆ ನೀಡುತ್ತಿರುವ ಮೊದಲ ಪಾಶ್ಚಿಮಾತ್ಯ ದೇಶವಾಗಿ ಸ್ಪೇನ್ ಹೊರಹೊಮ್ಮಲಿದೆ.‌

ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮತ್ತು ಜಾಂಬಿಯಾ ದೇಶಗಳು ಈ ನೀತಿಯನ್ನು ಈಗಾಗಲೇ ಜಾರಿಗೆ ತಂದಿದೆ. ಮುಂದಿನ ವಾರ ಸ್ಪೇನ್ ಸರ್ಕಾರವು ಈ ಕ್ರಮವನ್ನು ಅನುಮೋದಿಸಲಿದೆ ಎಂದು ಕ್ಯಾಡೆನಾ ಸೆರ್ ರೇಡಿಯೋ ಸ್ಟೇಷನ್ ಘೋಷಿಸಿದೆ. ಮಂಗಳವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ನಿಯಮ ಅಂಗೀಕಾರವಾಗಲಿದೆ.

ಸ್ಪ್ಯಾನಿಷ್ ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿ ಸೊಸೈಟಿಯು ಋತುಚಕ್ರದ ಸುಮಾರು ಮೂರನೇ ಒಂದು ಭಾಗದಷ್ಟು ಮಹಿಳೆಯರು ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ ಇದನ್ನು ಡಿಸ್ಮೆನೊರಿಯಾ ಎಂದು ಕರೆಯಲಾಗುತ್ತದೆ. ಇದು ತಲೆನೋವು ಮತ್ತು ಅತಿಸಾರ, ಜ್ವರ ಮತ್ತು ಹೊಟ್ಟೆ ನೋವಿಗೂ ಕಾರಣವಾಗಬಹುದು. ಆ ಸಮಯದಲ್ಲಿ ಹೆಣ್ಣುಮಕ್ಕಳಿಗೆ ವಿಶ್ರಾಂತಿ ಬಹಳ ಅಗತ್ಯವಾಗಿದೆ. ಈ ಕಾರಣದಿಂದಾಗಿ ಮುಟ್ಟಿನ ರಜೆ ನೀಡಲು ಸ್ಪೇನ್‌ ಸರ್ಕಾರ ನಿರ್ಧಾರ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!