ವಿಧಾನಸಭಾ ಸದಸ್ಯರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಆಹ್ವಾನ ನೀಡಿದ ಸ್ಪೀಕರ್ ಕಾಗೇರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಎಲ್ಲಾ ವಿಧಾನಸಭಾ ಸದಸ್ಯರಿಗೆ ನಾಳೆ ಮಂತ್ರಿಮಾಲ್​​​ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ನಾಳೆ ಸಂಜೆ 6.30 ಕ್ಕೆ ಮಂತ್ರಿ ಮಾಲ್​​​ನಲ್ಲಿ ಸಿನಿಮಾ ವೀಕ್ಷಣೆ ಆಯೋಜನೆ ಮಾಡಲಾಗಿದ್ದು, ಎಲ್ಲಾ ಶಾಸಕರಿಗೆ ಸ್ಪೀಕರ್ ಆಹ್ವಾನ ನೀಡಿದ್ದಾರೆ.
ಈ ಸಿನಿಮಾ ನೋಡುವುದರಿಂದ ಒಳ್ಳೆಯದಾಗುತ್ತದೆ. ಹಾಗಾಗಿ, ಎಲ್ಲರೂ ಸೇರಿ ಚಿತ್ರ ವೀಕ್ಷಿಸಲು ಹೋಗೋಣ ಎಂದು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರಿಗೆ ಹೇಳಿದ್ದಾರೆ.
ಈ ಚಿತ್ರ ವೀಕ್ಷಣೆಗೆ ಶೇ.100ರಷ್ಟು ತೆರಿಗೆ ವಿನಾಯಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ. ಹಾಗು ಸಿನಿಮಾವನ್ನು ನಿನ್ನೆ ನೋಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!