Wednesday, August 17, 2022

Latest Posts

ತಿರುವನಂತಪುರದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ ವಿಶೇಷ ಉಚಿತ ರೈಲು

ಹೊಸ ದಿಗಂತ ವರದಿ, ಕಾಸರಗೋಡು:

ತಿರುವನಂತಪುರದಲ್ಲಿ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಉದ್ಯೋಗಾರ್ಥಿಗಳಿಗೆ ವಿಶೇಷ ಉಚಿತ ರೈಲು
ಸೇವೆ ಒದಗಿಸಲಾಗಿದೆ. ಮಾರ್ಚ್ 12ರ ವರೆಗೆ ಮಂಗಳೂರು ಮತ್ತು ತಿರುವನಂತಪುರ ನಡುವೆ ಪ್ರತಿದಿನ ವಿಶೇಷ ರೈಲುಗಳನ್ನು ರೈಲ್ವೇ ಮಂಡಳಿಯು ಮಂಜೂರು ಮಾಡಿದೆ.
ಈ ವಿಶೇಷ ರೈಲು ರಾತ್ರಿ 8ಕ್ಕೆ ತಿರುವನಂತಪುರದಿಂದ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ತಲುಪಲಿದೆ. ಈ ರೈಲು ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 8.05ಕ್ಕೆ ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ತಿರುವನಂತಪುರಕ್ಕೆ ಆಗಮಿಸಲಿದೆ.
ರೈಲುಗಾಡಿಯು ಕಳಕೂಟಂ, ವರ್ಕಲ, ಕೊಲ್ಲಂ, ಕಾಯಂಕುಳಂ, ಚೆಂಗನ್ನೂರು, ಕೋಟ್ಟಾಯಂ, ಎರ್ನಾಕುಳಂ ಟೌನ್, ಆಲುವಾ, ತೃಶ್ಶೂರು, ಶೊರ್ನೂರು, ತಿರೂರು, ಕಲ್ಲಿಕೋಟೆ, ವಡಗರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಅಭ್ಯರ್ಥಿಗಳು ತಮ್ಮ ಅಡ್ಮಿಟ್ ಕಾರ್ಡ್ ನ್ನು ಕೌಂಟರ್‌ನಲ್ಲಿ ತೋರಿಸಬೇಕು ಮತ್ತು ಯುಟಿಎಸ್ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!