Monday, August 8, 2022

Latest Posts

ನಿಮ್ಮ ಹಬ್ಬದ ಸಂಭ್ರಮ ಹೆಚ್ಚಿಸಲು ರೈಲ್ವೆ ಇಲಾಖೆಯಿಂದ ವಿಶೇಷ ಕೊಡುಗೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇನ್ನೇನು  ಹಬ್ಬಗಳು ಸಾಲು ಸಾಲಾಗಿ ಬರಲಿದ್ದು, ಜನರು ಉದ್ಯೋಗ ಮಾಡುವ ಸ್ಥಳದಿಂದ ತವರೂರಿನ ಕಡೆಗೆ ಪ್ರಯಾಣ ಮಾಡುವುದು ಕೂಡ ಹೆಚ್ಚುತ್ತದೆ. ಹೀಗಾಗಿ ಸೌತ್ ಸೆಂಟ್ರಲ್ ರೈಲ್ವೇಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆ ನೀಡುವ ಬಗ್ಗೆ ತಿಳಿಸಿದೆ.

ಹೌದು… ಸೌತ್ ಸೆಂಟ್ರಲ್ ರೈಲ್ವೇ ಹಬ್ಬದ ಸಂಭ್ರಮಕ್ಕೆ 18 ವಿಶೇಷ ರೈಲು ಸೇವೆ ನೀಡುವ ಬಗ್ಗೆ ಭಾರತೀಯ ರೈಲ್ವೆ ತಿಳಿಸಿದೆ.

ಈ ಬಗ್ಗೆ ಸೌತ್ ಸೆಂಟ್ರಲ್ ರೈಲ್ವೇ ಟ್ವೀಟ್ ಮಾಡಿದ್ದು, ‘ಬಹುತೇಕ ಈ 18 ರೈಲುಗಳು ಇದೇ ತಿಂಗಳು 28ರಿಂದ ಆರಂಭವಾಗಲಿದ್ದು, ಡಿಸೆಂಬರ್ ಅಂತ್ಯದವರೆಗೂ ಸಂಚಾರ ನಡೆಸಲಿದೆ. ಈ ಎಲ್ಲಾ ರೈಲು ಸೇವೆಗಳು ಸಂಪೂರ್ಣ ರಿಸರ್ವ್ಡ್ ಆಗಿರಲಿವೆ” ಎಂದು ತಿಳಿಸಿದೆ.

ವಿಶೇಷ ರೈಲು ಸೇವೆ ಯಾವೆಲ್ಲಾ ಸ್ಥಳಕ್ಕೆ? ಲಿಸ್ಟ್ ಇಲ್ಲಿದೆ…

  • ಹೊವ್ರ- ಹೈದರಾಬಾದ್
  • ಹೈದರಾಬಾದ್- ಹೊವ್ರ
  • ಶಾಲಿಮಾರ್- ಸಿಕಂದರಾಬಾದ್
  • ಸಿಕಂದರಾಬಾದ್- ಶಾಲಿಮಾರ್
  • ಹಟಿಯಾ- ಯಶವಂತಪುರ
  • ಯಶವಂತಪುರ- ಹಟಿಯಾ
  • ಹೊವ್ರ- ಮೈಸೂರು
  • ಮೈಸೂರು- ಹೊವ್ರ
  • ಹೊವ್ರ- ಯಶವಂತಪುರ
  • ಯಶವಂತಪುರ- ಹೊವ್ರ
  • ಹೊವ್ರ- ವಾಸ್ಕೊ ಡ ಗಾಮ
  • ವಾಸ್ಕೊ ಡ ಗಾಮ- ಹೊವ್ರ
  • ಹೊವ್ರ- ಪುದುಚೆರಿ
  • ಪುದುಚೆರಿ- ಹೊವ್ರ
  • ಹೊವ್ರ- ಎರ್ನಾಕುಲಂ
  • ಎರ್ನಾಕುಲಂ- ಹೊವ್ರ
  • ಹಟಿಯಾ- ಬೆಂಗಳೂರು ಕಂಟೋನ್ಮೆಂಟ್
  • ಬೆಂಗಳೂರು ಕಂಟೋನ್ಮೆಂಟ್- ಹಟಿಯಾ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss