ಮತ್ತೆ ಕೈಕೊಟ್ಟ ಸ್ಪೈಸ್‌ಜೆಟ್‌: ದುಬೈ-ಮಧುರೈ ವಿಮಾನ ವಿಳಂಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಪೈಸ್‌ಜೆಟ್‌ನ ಬೋಯಿಂಗ್‌ ಬಿ737 ಮ್ಯಾಕ್ಸ್‌ ವಿಮಾನದ ನೋಸ್ ವೀಲ್ಹ್ ದೋಷದಿಂದ ದುಬೈ-ಮಧುರೈ ವಿಮಾನ ತಡವಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷದ ಒಂಬತ್ತನೇ ಘಟನೆಯಾಗಿದೆ.
ಜೂನ್ 19ರಿಂದ ಸ್ಪೈಸ್ ಜೆಟ್ ನ ವಿಮಾನದಲ್ಲಿ ಎಂಟು ತಾಂತ್ರಿಕ ಅಸಮರ್ಪಕ ಘಟನೆಗಳ ವರದಿಯಾಗಿದ್ದರಿಂದ ಜುಲೈ 6ರಂದು DGCA ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ನೀಡಿತ್ತು.
ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ಸ್ಥಾಪಿಸಲು ವಿಮಾನ ಸಂಸ್ಥೆ ವಿಫಲವಾಗಿದೆ ಎಂದು ವಿಮಾನಯಾನ ನಿಯಂತ್ರಕ ಹೇಳಿದೆ.ಳು ಹೇಳಿದರು.

ಈ ವಿಷಯದ ಕುರಿತು ಸ್ಪೈಸ್‌ಜೆಟ್ ವಕ್ತಾರರು, ‘2022 ಜುಲೈ 11ರಂದು ಸ್ಪೈಸ್‌ಜೆಟ್ ಫ್ಲೈಟ್ SG23 ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ದುಬೈನಿಂದ ಮಧುರೈಗೆ ಕಾರ್ಯ ನಿರ್ವಹಿಸುವುದು ವಿಳಂಬವಾಯಿತು. ತಕ್ಷಣವೇ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಯಿತು ಮತ್ತು ಪ್ರಯಾಣಿಕರನ್ನು ಭಾರತಕ್ಕೆ ಕರೆತರಲಾಯಿತು ಎಂದರು.

‘ಯಾವುದೇ ವಿಮಾನಯಾನ ಸಂಸ್ಥೆಯಲ್ಲೂ ವಿಮಾನ ವಿಳಂಬಗಳು ಸಂಭವಿಸಬಹುದು. ಈ ವಿಮಾನದಲ್ಲಿ ಯಾವುದೇ ಘಟನೆ ಅಥವಾ ಸುರಕ್ಷತೆಯ ಭಯವಿಲ್ಲ ಎಂದು ವಕ್ತಾರರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!