ಯಾವ ಕಾಲದಲ್ಲಿ ಯಾವ ಹಣ್ಣುಗಳು ಸಿಗುತ್ತವೆಯೋ ಅವನ್ನು ಚೆನ್ನಾಗಿ ತಿನ್ನಬೇಕು. ಇದೀಗ ಪೇರಲೆಕಾಯಿ ಕಾಲ. ಪೇರಲೆಹಣ್ಣಿನ ಸ್ಪೈಸಿ ಜ್ಯೂಸ್ ಮಾಡೋದು ಹೇಗೆ ನೋಡಿ…
ಮಾಡುವ ವಿಧಾನ
ಮೊದಲು ಹಣ್ಣಾದ ಪೇರಲೆಯನ್ನು ಭಾಗ ಮಾಡಿ ಮಿಕ್ಸಿಗೆ ಹಾಕಿ.
ನಂತರ ಪಿಂಕ್ ಸಾಲ್ಟ್, ಸ್ವಲ್ಪ ಖಾರದಪುಡಿ ಹಾಕಿ,
ನಂತರ ಒಂದು ಹಸಿಮೆಣಸು ಹಾಕಿ.
ರೋಸ್ಟೆಡ್ ಜೀರಾ ಪುಡಿ ಹಾಕಿ.
ನಂತರ ಸಕ್ಕರೆ ಹಾಕಿ.
ಈಗ ನೀರು ಹಾಕಿ ಮಿಕ್ಸಿ ಮಾಡಿ.
ಜಾಸ್ತಿ ಗಟ್ಟಿಯೂ ಇರದಂತೆ, ನೀರಾಗಿ ಇರದಂತೆ ರುಬ್ಬಿದರೆ ಸ್ಪೈಸಿ ಪೇರಲೆ ಜ್ಯೂಸ್ ರೆಡಿ.