ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಡಿಕೆ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತ: ನೆರವಿಗೆ ಮನವಿ

ಹೊಸ ದಿಗಂತ ವರದಿ, ಮಂಗಳೂರು:

ವಾಮಂಜೂರು ತಿರುವೈಲು ನಿವಾಸಿಯಾಗಿರುವ ಶೇಖರ ದೇವಾಡಿಗ ಎಂಬವರು ಅಡಿಕೆ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದು, ಬಡ ಕುಟುಂಬದ, ಮಕ್ಕಳಿಲ್ಲದ ಇವರು ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಗೆ ದಾನಿಗಳ ನೆರವು ಕೋರಿದ್ದಾರೆ.

೬೫ ವರ್ಷ ಪ್ರಾಯದ ಶೇಖರ ದೇವಾಡಿಗ ಅವರು  ಜೀವನೋಪಾಯಕ್ಕಾಗಿ ಅಡಿಕೆ ಮರ ಹತ್ತಿ ಅಡಿಕೆ ತೆಗೆಯುವ ವೃತ್ತಿ ನಡೆಸುತ್ತಿದ್ದರು. ಇದೀಗ ಅವರ ವೃತ್ತಿಯೇ ಅವರನ್ನು ಹಾಸಿಗೆಯಿಂದ ಮೇಲೇಳದಂತೆ ಮಾಡಿದೆ. ಕಳೆದ ೪೦ ವರ್ಷಗಳಿಂದ ಅಡಿಕೆ ತೆಗೆಯುವ ವೃತ್ತಿ ಮಾಡುತ್ತಿದ್ದ ಅವರು ಕಳೆದ ಜನವರಿ ತಿಂಗಳಿನಲ್ಲಿ ಮಂಗಳೂರಿನ ಮರೋಳಿಯಲ್ಲಿ ಅಡಿಕೆ ತೆಗೆಯುತ್ತಿರುವಾಗ ಅಡಿಕೆ ಮರದಿಂದ ಕೆಳಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿ ಮಲಗಿದ್ದಲ್ಲೇ ಇದ್ದಾರೆ.

ವೃತ್ತಿಗೆ ನಿವೃತ್ತಿ ಪಡೆದು ಮೊಮ್ಮಕ್ಕಳೊಂದಿಗೆ ಕಾಲಕಳೆಯಬೇಕಾದ ಈ ಸಂದರ್ಭದಲ್ಲಿ ತನ್ನ ಮುಂದಿನ ಚಿಕಿತ್ಸೆಗೆ ಹಾಗೂ ಜೀವನ ನಿರ್ವಹಣೆಗೆ ಹಣವಿಲ್ಲದೆ ತಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಸಹೃದಯಿ ನೆರವಿನ ಹಸ್ತಗಳಿಗೆ ಕೈ ಚಾಚುವಂತಾಗಿದೆ. ಅಡಿಕೆ ಸಿಪ್ಪೆ ಸುಲಿಯಲು ಹೋಗುತ್ತಿದ್ದ ಶೇಖರ ದೇವಾಡಿಗ ಅವರ ಹೆಂಡತಿಯೂ ವಯೋಸಹಜ ಅನಾರೋಗ್ಯ ಕಾರಣದಿಂದ ಕೆಲಸಕ್ಕೆ ಹೋಗಲಾಗುತ್ತಿಲ್ಲ. ಈ ದಂಪತಿಗೆ ಮಕ್ಕಳಿಲ್ಲ. ಸಂಬಂಧಿಕರು ಕೂಡ ಅನುಕೂಲಸ್ಥರಲ್ಲ. ತನಗೆ ತನ್ನ ಮಡದಿ, ತನ್ನ ಮಡದಿಗೆ ತಾನು ಎಂದು ಜೀವಿಸುತ್ತಿದ್ದ ಶೇಖರ್ ಅವರ ಬಾಳು ಈಗ ಗೋಳಾಗಿದೆ. ಸಹೃದಯರು
ಈ ಹಿರಿಜೀವಕ್ಕೆ ನೆರವು ನೀಡಿ, ಚಿಕಿತ್ಸೆ, ನಿತ್ಯ ಜೀವನಕ್ಕೆ ನೆರವಾಗಬೇಕಿದೆ.

ನೀವು ನೆರವಾಗುವಿರಾ…
ಶೇಖರ ದೇವಾಡಿಗ, ಕಟೀಲೇಶ್ವರಿ ನಿಲಯ, 3-35/142, ಮರಿಯಮ್ಮ ಮಂದಿರದಬಳಿ, ಮರಿಯನಗರ, ಪಚ್ಚನಾಡಿ, ತಿರುವೈಲು ವಾಮಂಜೂರು,  ಮಂಗಳೂರು 575028. ಫೋನ್ ನಂ : 9632894709, ಪತ್ನಿಯ ಹೆಸರು: ಶ್ಯಾಮಲಾ ದೇವಾಡಿಗ
ಬ್ಯಾಂಕ್ ವಿವರ:
ಶ್ಯಾಮಲಾ, ಬ್ಯಾಂಕ್ ಆಫ್ ಬರೋಡಾ, ವಾಮಂಜೂರು ಶಾಖೆ, ಅಕೌಂಟ್ ನಂಬರ್- 74050100009051, ಐಎಫ್‌ಎಸ್‌ಸಿ ಕೋಡ್: BARB0(zero)VJVAMA

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss