ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾರಿಗೆ ನೌಕರರಲ್ಲಿ ಒಡಕು: ಎಲ್ಲೆ ಮೀರಿ ಹೋಗಲು ಬಿಡೋದಿಲ್ಲ ಎಂದ ಕೋಡಿಹಳ್ಳಿ ಚಂದ್ರಶೇಖರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಲಾಕ್​ ಡೌನ್ ವೇಳೆ ನಾನು ವಿಶ್ರಾಂತಿಯಲ್ಲಿದ್ದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ. ಈ ವಿಚಾರ ಹಿಂದೆ ಕೂಡ ಒಮ್ಮೆ ಚರ್ಚೆಯಾಗಿತ್ತು. ಆಗ ಎಲ್ಲರನ್ನು ಕೂರಿಸಿ ಬಗೆಹರಿಸುವ ಕೆಲಸ ಮಾಡಿದ್ದೆ. ಈಗ ಕೂಡ ಇವರಿಗೆ ತಿಳಿಹೇಳುವ ಪ್ರಯತ್ನವನ್ನು ಮಾಡುತ್ತೇನೆ, ಸರಿಯಾಗುತ್ತೆ. ಎಲ್ಲೆ ಮೀರಿ ಹೋಗಲು ಬಿಡೋದಿಲ್ಲ ಎಂದು ಸಾರಿಗೆ ನೌಕರರ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸಾರಿಗೆ ನೌಕರರ ಉಚ್ಛಾಟನೆ, ರಾಜೀನಾಮೆ ಶುರುವಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ಎಲ್ಲ ಸರ್ಕಾರಗಳಲ್ಲಿ ಜನಶಕ್ತಿ ಅಥವಾ ಕಾರ್ಮಿಕ ಶಕ್ತಿಯನ್ನು ಒಡೆಯುವ ಪ್ರಯತ್ನ ನಡೆಯುತ್ತದೆ. ಆ ನಿಟ್ಟಿನಲ್ಲಿ ಸರ್ಕಾರದ ನಿರಂತರ ಕ್ರಿಯೆ ಇದಾಗಿದ್ದು, ದೊಡ್ಡ ಅಪಾಯವೇನು ಅಲ್ಲ. ಇದನ್ನು ಸರಿ ಮಾಡಬಹುದು ಅಂತ ಅಂದುಕೊಂಡಿದ್ದೇನೆ ಎಂದರು.
ಆನಂದ್ ಉಚ್ಛಾಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಸಣ್ಣ ಸಣ್ಣ ವಿಚಾರಗಳಿಗೆ ಯಾರನ್ನೋ ವಜಾ ಅಥವಾ ಉಚ್ಚಾಟನೆ ಮಾಡುವುದು, ಪ್ರಜಾಪ್ರಭುತ್ವದಲ್ಲಿ ಸರಿಯಾದ ಮಾರ್ಗವಲ್ಲ. ಉಚ್ಚಾಟನೆ ಮಾಡಲು ಬಲವಾದ ಕಾರಣ ಇರಬೇಕು. ಆದರೆ ಉಚ್ಚಾಟನೆ ಮಾಡುವ ಸಂದರ್ಭ ಇದಲ್ಲ. ನೌಕರರ ಕಷ್ಟವನ್ನ ಬಗೆಹರಿಸುವ ಕೆಲಸ ಈಗ ಆಗಬೇಕು. ಸಾರಿಗೆ ನೌಕರರ ಆಮಾನತ್ತು, ವರ್ಗಾವಣೆ, ವೇತನ ಕಡಿತ ಮುಖ್ಯವಾಗಬೇಕಿತ್ತು. ಈ ಉದ್ದೇಶದಿಂದ ನಾವು ಕೂಡ ಎಲ್ಲೋ ದಾರಿ ತಪ್ಪಿದಂತೆ ಗೊತ್ತಾಗ್ತಿದೆ.‌ ಸ್ವಲ್ಪ ದಿನದಲ್ಲಿ ಎಲ್ಲ ಸರಿ ಮಾಡುತ್ತೇನೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss