Saturday, August 13, 2022

Latest Posts

ದೈಹಿಕ ಶಕ್ತಿ ವೃದ್ಧಿಸಲು ಕ್ರೀಡೆ ಅತ್ಯಾವಶ್ಯಕ: ಡಾ. ಎನ್.ವಿ. ಪ್ರಸಾದ

ಹೊಸ ದಿಗಂತ ವರದಿ, ಕಲಬುರಗಿ:

ದೈನಂದಿನ ಜೀವನದಲ್ಲಿ ಅರೋಗ್ಯವಂತರಾಗಲು ಹಾಗೂ ಸಕ್ರಿಯವಾಗಿ ದೈಹಿಕ ಶಕ್ತಿ ವೃದ್ಧಿಸಲು ಕ್ರೀಡೆ ಅತ್ಯಾವಶ್ಯಕವಾಗಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ ತಿಳಿಸಿದರು. ಗುರುವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2020-21ನ್ನು ಪಾರಿವಾಳ ಮತ್ತು ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕ್ರೀಡಾಕೂಟ ಆಯೋಜನೆ ನೋಡುತ್ತಿದ್ದರೆ, ಇದೇ ಮೈದಾನದಲ್ಲಿ 2006ರಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ತರಬೇತಿ ಪಡೆದ ದಿನಗಳು ಕಣ್ಣೆದುರಿಗೆ ಬರುತ್ತಿದೆ. ಕೋವಿಡ್ ಸಮಯದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಈಗ ಕ್ರೀಡಾಕೂಟ ಏರ್ಪಡಿಸಿರುವುದರಿಂದ ಸಂತೋಷವಾಗುತ್ತಿದೆ. ಅದೇ ರೀತಿ ತಾವುಗಳು ಸಹ ಕ್ರೀಡಾಕೂಟದಲ್ಲಿ ಭಾಗಿಯಾಗುವಾಗ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಎಂದು ಅವರು ಸ್ಪರ್ಧಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಮಾತನಾಡಿ, ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಹಾಗೂ ಮಾನಸಿಕ ಶಕ್ತಿಯ ಅಗತ್ಯವಿದೆ ಎಂದರು. ಪರೇಡ್ ಕಮಾಂಡರ್ ಆರ್.ಪಿ.ಐ. (ಡಿ.ಎ.ಆರ್) ಹನುಮಂತ ನಾಯಕ ಅವರ ನೇತೃತ್ವದಲ್ಲಿ ಜಿಲ್ಲೆಯ 6 ತಂಡಗಳಾದ ಡಿ.ಎ.ಆರ್ ವಿಭಾಗ, ಗ್ರಾಮೀಣ ಉಪ ವಿಭಾಗ, ಚಿಂಚೋಳಿ ಉಪ ವಿಭಾಗ, ಶಹಾಬಾದ ಉಪ ವಿಭಾಗ, ಆಳಂದ ಉಪ ವಿಭಾಗ ಹಾಗೂ ಮಹಿಳಾ ವಿಭಾಗಗಳು ತಂಡಗಳಿಂದ ಪ್ರಾದೇಶಿಕ ಆಯುಕ್ತರು ಗೌರವ ವಂದನೆ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ಅವರು ಕಳೆದ ವರ್ಷ ಸರ್ವಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ಪಡೆದ ಕಲಬುರಗಿ ಡಿ.ಎ.ಆರ್. ಎಸಿಪಿ ಉದಯಕುಮಾರ ಅವರಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ರಾಜ್ಯ ತೊಗರಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಸಾಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಕೆ.ಎಸ್.ಆರ್.ಪಿ. 6ನೇ ಪಡೆಯ ಕಮಾಂಡರ್ ಬಸವರಾಜ ಜಿಳ್ಳೆ, ಎ.ಸಿ.ಬಿ. ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ವಿವಿಧ ಪೆÇಲೀಸ್ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಿವೃತ್ತ ಪೆÇಲೀಸ್ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss