Sunday, August 14, 2022

Latest Posts

ಒತ್ತಡದ ಜೀವನದಿಂದ ಹೊರಬರಲು ಪೊಲೀಸರಿಗೆ ಕ್ರೀಡಾಕೂಟಗಳು ಸಹಕಾರಿ: ಜಿ.ಪಂ.ಸಿಇಓ ರಘುನಂದನ್ ಮೂರ್ತಿ

ಹೊಸದಿಗಂತ ವರದಿ, ಕೊಪ್ಪಳ:

ಕೆಲಸದ ಒತ್ತಡ ಜೀವನ ನಿವಾರಣೆಗೆ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಹೇಳಿದರು.

ಅವರು ಶುಕ್ರವಾರ ಬೆಳಿಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಕೆಲಸದಲ್ಲಿ ಮಾಡುವ ಸರಕಾರಿ ಅಧಿಕಾರಿಗಳಿಗೆ ಒತ್ತಡಗಳು ಬಹಳ ಇರುತ್ತದೆ. ಅದರಲ್ಲಿ ಪೊಲೀಸರಿಗೆ ಮಾನಸಿಕ ಜೋತೆಗೆ ದೈಹಿಕವಾಗಿ ಒತ್ತಡಗಳು ಹೆಚ್ಚುತ್ತಿವೆ. ಆದರೆ ಅದು ನಿವಾರಣೆಗೆ ಪ್ರತಿ ವರ್ಷ ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಅವಶ್ಯಕವಾಗಿದೆ. ಬೇರೆ ಬೇರೆ ಹಂತದಲ್ಲೂ ಕೂಡ ಒಂದು ತಂಡವಾಗಿ ಕೆಲಸ ಮಾಡಿದರೂ ಇಡಿ ಶ್ರೇಯಸ್ಸು ಆ ತಂಡಕ್ಕೆ ಹೋಗುತ್ತದೆ. ಆದರೆ, ಆಟದಲ್ಲೂ ಸೋಲು ಗೇಲವು ಮುಖ್ಯವಲ್ಲ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ ಎಂದರು.

ಡಿಆರ್ ಘಟಕದಲ್ಲಿ ಕೆಲಸ ಮಾಡುವ ಪ್ರಸನ್ನ ಕ್ರೀಡಾ ಜ್ಯೋತಿಯನ್ನು ತಂದು ಕ್ರೀಡಾ ಜ್ಯೋತಿಯನ್ನು ಬೇಳಗಿಸಿದರು.
ಪೊಲೀಸ್ ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿಯನ್ನು ವಿಧಿಸಿದರು.

ಡಿವೈಎಸ್ಪಿಗಳಾದ ವೇಂಕಟಪ್ಪ ನಾಯಕ, ಆರ್.ಎಸ್.ಉಜ್ಜನಕೊಪ್ಪ, ಸಿಪಿಐಗಳಾದ ಮಾರುತಿ ಗುಳ್ಳಾರಿ, ವಿಶ್ವನಾಥ ಹಿರೇಗೌಡ್ರ, ಉದಯ ರವಿ, ರವಿ ಉಕ್ಕುಂದ , ನಾಗರಡ್ಡಿ, ಶಿವರಾಜ, ನಿಂಗಪ್ಪ ಕುಷ್ಟಗಿ, ಚಂದ್ರಶೇಖರ, ಪಿಐಗಳಾದ ವೇಂಕಟಸ್ವಾಮಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss