Thursday, August 11, 2022

Latest Posts

ಮಂಡ್ಯ| ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಡಿಸಿ ಅಶ್ವಥಿ

ಹೊಸದಿಗಂತ ವರದಿ, ಮಂಡ್ಯ:

ಯಾವುದೇ ವ್ಯಕ್ತಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕಾದೆ ಕ್ರೀಡೆಗಳು ಸಹಾಯಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಹೇಳಿದರು

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸೇವೆಯು ಅತ್ಯಂತ ಒತ್ತಡಕರವಾಗಿರುವುದರಿಂದ ದೈಹಿಕವಾಗಿ ಸದೃಢರಾಗಿರಬೇಕು. ಹಾಗಾಗಿ ಮಿಲಿಟರಿ, ಪೊಲೀಸ್ ಹಾಗೂ ಇತರೆ ಸಮವಸ್ತ್ರ ಆಧಾರಿತ ಸೇವೆಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ ಎಂದರು.

ಇಡೀ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್ ಇಲಾಖೆಯವರು ಮುಖ್ಯ ಪಾತ್ರವಹಿಸುತ್ತಾರೆ. ದೇಶದ ಯಾವುದೇ ರಾಜ್ಯದಲ್ಲಾಗಲಿ ತುರ್ತು ಪರಿಸ್ಥಿತಿ ಬಂದಾಗ ಪೊಲೀಸ್ ಇಲಾಖೆಯು ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತದೆ. ಅವರ ಸೇವೆ ಆರಂಭವಾದ ದಿನದಿಂದ ಹಗಲು ರಾತ್ರಿ ಎನ್ನದೇ ಎಂತಹ ಸಂದರ್ಭಗಳಲ್ಲೂ ಕೂಡ ನಿಸ್ವಾರ್ಥ ಸೇವೆ ಮಾಡುತ್ತಾರೆ ಎಂದು ಶ್ಲಾಘಿಸಿದರು.

ಸಾರ್ವಜನಿಕರು ಯಾವುದೇ ಆತಂಕ, ಭಯವಿಲ್ಲದೆ ಸಮಾಜದಲ್ಲಿ ಶಾಂತಿಯಿಂದ ಬದುಕಲು ಪೊಲೀಸ್ ಇಲಾಖೆಯ ನಿಷ್ಠೆಯೇ ಕಾರಣ. ಹಾಗಾಗಿ ಕೆಲಸದ ಒತ್ತಡವನ್ನು ಪಕ್ಕಕ್ಕಿಟ್ಟು ಈ ಎರಡು ದಿನ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಂದಿನ ದಿನಗಳಲ್ಲೂ ಸಾರ್ವಜನಿಕರಿಗೆ ಇದೇ ರೀತಿಯ ಉತ್ತಮ ಸೇವೆ ನೀಡಿ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss