ಪ್ರಧಾನಿ, ಸುಪ್ರೀಂ, ಚುನಾವಣಾ ಆಯೋಗದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: 3 ಯೂಟ್ಯೂಬ್ ಚಾನೆಲ್ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಪ್ರಮುಖ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಒಟ್ಟು 33 ಲಕ್ಷ ಚಂದಾದಾರರನ್ನು ಹೊಂದಿದ್ದ 3 ಯೂಟ್ಯೂಬ್ ಚಾನೆಲ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನ್ಯೂಸ್ ಹೆಡ್‌ಲೈನ್ಸ್, ಸರ್ಕಾರಿ ಅಪ್‌ಡೇಟ್ ಮತ್ತು ಆಜ್ ತಕ್ ಲೈವ್ ಎಂಬ ಹೆಸರಿನ ಈ 3 ಚಾನೆಲ್‌ಗಳ ವಿರುದ್ಧದ ತನಿಖೆಯನ್ನು ಮಾಹಿತಿ ಪ್ರಸಾರ ಮಾಡುವ ಸರ್ಕಾರದ ನೋಡಲ್ ಏಜೆನ್ಸಿಯಾದ ಪ್ರೆಸ್ ಇನ್‌ಫಾರ್ಮೇಶನ್‌ ಬ್ಯೂರೋದ ಸತ್ಯ-ಪರಿಶೀಲನಾ ಘಟಕವು ನಡೆಸಿದೆ.

ಈ ಘಟಕವು 40ಕ್ಕೂ ಹೆಚ್ಚು ಫ್ಯಾಕ್ಟ್‌ಚೆಕ್‌ಗಳನ್ನು ನಡೆಸಿದ್ದು, ಪ್ರಧಾನಿ ಮೋದಿ, ಸಿಜೆಐ, ಸುಪ್ರೀಂ ಕೋರ್ಟ್ , ಚುನಾವಣಾ ಆಯೋಗ ಹಾಗೂ ಇವಿಎಂ ಮತದಾನ ವ್ಯವಸ್ಥೆಯ ಬಗ್ಗೆ ಅನೇಕ ತಪ್ಪು ಮಾಹಿತಿ ಪ್ರಸಾರ ಮಾಡಿರುವುದನ್ನು ಪತ್ತೆಹಚ್ಚಿದೆ.

ಇನ್ನು ಈ ಈ ವೀಡಿಯೋಗಳನ್ನು 30 ಕೋಟಿಗೂ ಅಧಿಕ ಮಂದಿ ಹೆಚ್ಚು ಬಾರಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಈ ಯೂಟ್ಯೂಬ್ ಚಾನೆಲ್‌ಗಳು ಪ್ರಮುಖ ಸುದ್ದಿ ವಾಹಿನಿಯ ಲೋಗೋ ಹಾಗೂ ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಿಕೊಂಡಿದ್ದವು. ಈ ಮೂಲಕ ತಮ್ಮ ವೀಕ್ಷಕರಿಗೆ ಸುದ್ದಿ ಅಧಿಕೃತ ಎಂದು ನಂಬುವಂತೆ ಮಾಡಿ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವ ಮೂಲಕ ಹಣ ಗಳಿಸುತ್ತಿದ್ದವು ಎಂದು ಪಿಐಬಿ (ತನಿಖಾ ಘಟಕ) ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!