spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ಪುಟ್ನಿಕ್‌ ಲೈಟ್: ಭಾರತದಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ಡಿಸಿಜಿಐ ಗ್ರೀನ್ ಸಿಗ್ನಲ್

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ವಿರುದ್ಧ ಹೋರಾಡಲು ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ -ಲೈಟ್ ಸಿಂಗಲ್ ಡೋಸ್ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮೋದನೆ ನೀಡಿದೆ.

ಸ್ಪುಟ್ನಿಕ್ ಲೈಟ್ ಕೊರೋನಾ ವಿರುದ್ಧ ಶೇ 78.6ರಿಂದ ಶೇ 83.7ರಷ್ಟು ಪರಿಣಾಮಕಾರಿಯಾಗಿದೆ ಎಂಬ  ಇತ್ತೀಚಿನ ವರದಿ ಪ್ರಕಟವಾದ ಬೆನ್ನಲ್ಲೇ ಡಿಸಿಜಿಐ ಅನುಮೋದನೆ ನೀಡಿದೆ. ಭಾರತದಲ್ಲಿ ಶೀಘ್ರವೇ ಪ್ರಯೋಗ ಆರಂಭವಾಗಲಿದೆ.

ಸ್ಪುಟ್ನಿಕ್ ಲೈಟ್ ಎಂದರೇನು?

ಸ್ಪುಟ್ನಿಕ್ ಲೈಟ್ ಹೊಸ ಲಸಿಕೆ ಅಲ್ಲ. ರಷ್ಯಾ ನೀಡುತ್ತಿರುವ ಸ್ಪುಟ್ನಿಕ್ ವಿ ಯ ಎರಡು ಡೋಸ್ ಗಳ ಮೊದಲನೇ ಡೋಸ್. ಸ್ಪುಟ್ನಿಕ್ ವಿಯ ಎರಡು ಡೋಸ್ ಗಳು ಬೇರೆ ಬೇರೆ ವೈರಲ್ ಫ್ಯಾಕ್ಟರ್ ಗಳಲ್ಲಿದೆ. ಸ್ಪುಟ್ನಿಕ್ ವಿ ಮೊದಲ ಡೋಸ್ ಶೇ.79.4ರಷ್ಟು ಪರಿಣಾಮಾಕಾರಿಯಾಗಿದ್ದರಿಂದ ಇದಕ್ಕೆ ಸ್ಪುಟ್ನಿಕ್ ಲೈಟ್ ಎಂದು ಹೆಸರಿಡಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss