ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿ ಇಂದಿನಿಂದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ನೀಡಿಕೆ ಆರಂಭವಾಗಿದ್ದು, ಇಂದಿನ ಮೊದಲ ಡೋಸ್ ಅನ್ನು ಹೈದರಾಬಾದ್ ನಲ್ಲಿ ನೀಡಲಾಗಿದೆ.
ಮೇ.1ರಂದು ಭಾರತಕ್ಕೆ ಬಂದಿಳಿದ ಲಸಿಕೆಯನ್ನು ಇಂದು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ನ ಕಸ್ಟಮ್ ಫಾರ್ಮಾ ಸೇವೆಗಳ ಮುಖ್ಯಸ್ಥ ದೀಪಕ್ ಸಪ್ರಾ ಅವರು ಲಸಿಕೆ ಸ್ವೀಕರಿಸಿದ್ದಾರೆ. ಭಾರತಕ್ಕೆ ಮುಂದಿನ ಕೆಲವು ತಿಂಗಳಲ್ಲಿ ಹೆಚ್ಚಿನ ಲಸಿಕೆ ಬರುವ ನಿರೀಕ್ಷೆ ಇದ್ದು, ಭಾರತದಲ್ಲೂ ಲಸಿಕೆ ತಯಾರಿಕಾ ಸಂಸ್ಥೆ ಪ್ರಾರಂಭಿಸಲು ಡಾ. ರೆಡ್ಡೀಸ್ ಲ್ಯಾಬೊರೇಟರಿ ನಿರತವಾಗಿದೆ.
ಭಾರತದಲ್ಲಿ ಆಮದುಗೊಂಡ ಸ್ಪುಟ್ನಿಕ್ ವಿ ದರ ನಿಗದಿ ಮಾಡಿದ್ದು, ಪ್ರತಿ ಡೋಸ್ ಅನ್ನು 948 ರೂ ಮತ್ತು ಶೇ.5ರಷ್ಟು ಜಿಎಸ್’ಟಿ ನಿಗದಿಪಡಿಸಲಾಗಿದೆ.