spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ,ಮಂಗಳೂರು:

ನಗರದ ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ಮಣ್ಣಗುಡ್ಡೆ ಸಂಘನಿಕೇತನದಲ್ಲಿ ಐದು ದಿನಗಳ ಪರ್ಯಂತ ಜರುಗಿದ ೭೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಗಳವಾರ ಸಂಪನ್ನಗೊಂಡಿತು.
ಸರಳ ರೀತಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಿಸ್ಪಟ್ಟ ಗಣಪತಿ ವಿಗ್ರಹವನ್ನು ರಥಬೀದಿಯ ಮಹಮ್ಮಾಯ ತೀರ್ಥದಲ್ಲಿ ವಿಸರ್ಜಿಸಲಾಯಿತು. ಶುಕ್ರವಾರ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆರಂಭವಾದ ಸರಳ ಉತ್ಸವ, ಮಂಗಳವಾರ ವಿಸರ್ಜನೆಯೊಂದಿಗೆ ಅಂತ್ಯಗೊಂಡಿತು. ವಿಸರ್ಜನಾ ಮೆರವಣಿಗೆಯೂ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ನೆರವೇರಿತು. ಮೂರ್ತಿಯನ್ನು ಟ್ಯಾಬ್ಲೋ ಮೂಲಕ ನೇರವಾಗಿ ಮಹಮ್ಮಾಯ ತೀರ್ಥಕ್ಕೆ ತಂದ ಜಲಸ್ತಂಭನಗೊಳಿಸಲಾಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಡಾ.ವಾಮನ ಶೆಣೈ, ರಘುವೀರ್ ಕಾಮತ್, ವಿನೋದ್ ಶೆಣೈ, ಜೀವನರಾಜ್ ಶೆಣೈ, ಸತೀಶ್ ಪ್ರಭು, ಸುರೇಶ ಕಾಮತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss