ವಿವಾದಾತ್ಮಕ ಚೀನಾ ನೌಕೆಗೆ ಎಂಟ್ರಿ ಕೊಟ್ಟ ಲಂಕೆ: ಭಾರತ ಮೇಲೆ ಗೂಢಚರ್ಯೆ ಉದ್ದೇಶ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾದ ವಿವಾದಾತ್ಮಕ ಗೂಢಚರ್ಯೆ ನೌಕೆ ಯುವಾನ್ ವಾಂಗ್ 5ಗೆ ಶ್ರೀಲಂಕಾ ತನ್ನ ಹಂಬನ್‌ಟೋಟ ಬಂದರಿಗೆ ಪ್ರವೇಶಾವಕಾಶ ನೀಡಿದೆ.

ಈ ನಡುವೆ ಭಾರತೀಯ ಸೇನಾ ನೆಲೆಗಳ ಮೇಲೆ ಗೂಢಚರ್ಯೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ಈ ಚೀನಾ ನೌಕೆ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದು, ಚೀನೀ ನೌಕೆ ದಕ್ಷಿಣ ಭಾರತೀಯ ಪ್ರದೇಶಗಳ ಮೇಲೆ ಗುಪ್ತ ದೃಷ್ಟಿ ಹರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಆಕ್ಷೇಪವನ್ನು ವ್ಯಕ್ತಪಡಿಸಲಾಗಿದೆ. ಯುವಾನ್ ವಾಂಗ್ 5ಸಂಶೋಧನೆ ಮತ್ತು ಸರ್ವೇ ನೌಕೆ ಎಂದು ಹೇಳಿಕೊಳ್ಳಲಾಗಿದ್ದರೂ, ಈ ನೌಕೆಯನ್ನು ಗೂಢಚರ್ಯೆಗೂ ಬಳಸಿಕೊಳ್ಳಲಾಗುತ್ತಿರುವುದಾಗಿ ಹೇಳಲಾಗಿದೆ.

ಹಿಂದು ಮಹಾಸಾಗರದಲ್ಲಿ ಚೀನಾದ ಉಪಸ್ಥಿತಿ ಹೆಚ್ಚುತ್ತಿದ್ದು, ಶ್ರೀಲಂಕಾದ ಮೇಲೂ ಚೀನಾ ಅಕ್ರಮ ಪ್ರಭಾವ ಬೀರುತ್ತಿರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ. ಈ ಬಂದರನ್ನು ನಡೆಸಲು ಲಂಕೆಯ ಹಿಂದಿನ ಸರಕಾರ ಚೀನಾಕ್ಕೆ ಅವಕಾಶ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!