ವಿದೇಶಿ ಸಾಲ ತೀರಿಸಲು ನಮ್ಮಿಂದಾಗಲ್ಲ ಎಂದ ಶ್ರೀಲಂಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಶ್ರೀಲಂಕಾ ಸಂಚಲನ ವ್ಯಾಖ್ಯಾನಗಳನ್ನು ಹೊರಡಿಸಿದೆ. ಆರ್ಥಿಕ ಬಿಕ್ಕಟ್ಟು ನಿವಾರಿಸಲು ಇದುವರೆಗೂ ವಿದೇಶಿಗಳಿಂದ ತೆಗೆದುಕೊಂಡ ಸಾಲ ತೀರಿಸಲು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ನಮ್ಮ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಹೀಗಿರುವಾಗ ವಿದೇಶದಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಸಂವೇದನಾಶೀಲ ಹೇಳಿಕೆ ನೀಡಿದೆ.

ವಿದೇಶದಿಂದ 5,100 ಕೋಟಿ ಡಾಲರ್ (ಅಂದಾಜು 3.88 ಲಕ್ಷ ಕೋಟಿ ರೂ.) ಸಾಲವನ್ನು ಮರುಪಾವತಿ ಮಾಡುವುದಿಲ್ಲ ಎಂದು ಲಂಕಾ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಲಂಕಾದ 2.2 ಮಿಲಿಯನ್‌ ಜನರನ್ನು ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಗೆ ತಳ್ಳಿದೆ. ವಿದ್ಯುತ್‌ ಕಡಿತ, ತೈಲ ಸಂದಿಗ್ಧತೆ ಸೇರಿದಂತೆ ಇನ್ನಿತರೆ ವಸ್ತುಗಳಿಗಾಗಿ ಪ್ರಜೆಗಳು ಪರದಾಡುತ್ತಿದ್ದಾರೆ. ಇದರಿಂದ ಅಲ್ಲಿನ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಸ್ತುತ ನಮ್ಮ ಬಳಿ ಇರುವ ಹಣದಿಂದ ಸಾಲ ಮರುಪಾವತಿಗೆ ಬಳಸಿದರೆ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ, ದಿನನಿತ್ಯ ಸರಕುಗಳಿಗೂ ಪರದಾಡುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಬಾಹ್ಯ ಸಾಲ ಪಾವತಿಯನ್ನು ಸ್ಥಗಿತಗೊಳಿಸಿ ಉಳಿದ ಹಣದಿಂದ ಅಗತ್ಯ ವಸ್ತುಗಳ ಆಮದುಗಾಗಿ ಬಳಸಲಾಗುವುದು ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಗವರ್ನರ್ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!