ಆರ್ಥಿಕ ಬಿಕ್ಕಟ್ಟಿನಿಂದ ಕುಸಿದ ಲಂಕಾ ನೆರವಿಗೆ ನಿಂತ ಭಾರತ; 40,000 ಟನ್‌ ಅಕ್ಕಿ ರವಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಮಾನವೀಯ ದೃಷ್ಟಿಕೋನದಿಂದ ಭಾರತವು ತನ್ನ ನೆರೆ ರಾಷ್ಟ್ರಕ್ಕೆ ನೆರವಿನ ಹಸ್ತ ಚಾಚುತ್ತಿದೆ. ಆ ದೇಶಕ್ಕೆ 40,000 ಟನ್‌ ಅಕ್ಕಿಯನ್ನು ಕಳುಹಿಸುತ್ತಿದೆ.
೨.೨ ಕೋಟಿ ಜನಸಂಖ್ಯೆ ಹೊಂದಿರುವ ಶ್ರೀಲಂಕಾವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ. ಅಗತ್ಯ ವಸ್ತುಗಳು, ಆಹಾರ ಉತ್ಪನ್ನಗಳ ಬೆಲೆ ಗಗನಮುಖಿಯಾಗುತ್ತಿರುವುದರಿಂದ ಜನರು ಕಂಗೆಟ್ಟಿದ್ದಾರೆ. ದೇಶದಲ್ಲಿ ಅರಾಜಕತೆ ತಲದೂರಿದ್ದು ಪ್ರತಿಭಟನೆಗಳು ಭುಗಿಲೆದ್ದಿವೆ. ಅಗತ್ಯ ವಸ್ತುಗಳ ಅಮದಿಗೆ ಹಣವಿಲ್ಲದೆ ದೇಶವು ಜಾಗತಿಕ ನೆರವಿಗೆ ಮೊರೆಯಿಟ್ಟಿದೆ. ಭಾರತವು ತನ್ನ ನೆರೆಯ ರಾಷ್ಟ್ರಕ್ಕೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಲಂಕಾದಲ್ಲಿ ಆರ್ಥಿಕ ದುಸ್ಥಿತಿ ಉದ್ಭವವಾದ ಬಳಿಕ ಇಂಧನ, ಆಹಾರ ವಸ್ತುಗಳು ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನಿರುವುದಲ್ಲದೆ, 1 ಶತಕೋಟಿ ಡಾಲರ್‌ ಸಾಲವನ್ನು ನೀಡಿದೆ.
ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರವಾನೆಯಾಗುವುದರಿಂದ ಶ್ರೀಲಂಕಾದಲ್ಲಿ ಅಕ್ಕಿ ಬೆಲೆ ಇಳಿಕೆಕಾಣಲಿದೆ. ಈಗಾಗಲೇ ಅಕ್ಕಿ ಸಾಗಾಟ ಪ್ರಕ್ರಿಯೆಯು ಆರಂಭಗೊಂಡಿದೆ ಎಂದು ಲಂಕಾಕ್ಕೆ ಅಕ್ಕಿ ಪೂರೈಕೆ ಜವಾಬ್ದಾರಿ ಹೊತ್ತಿರುವ ಪಟ್ಟಾಭಿ ಅಗ್ರೋ ಫುಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಕೃಷ್ಣ ರಾವ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!