ಶ್ರೀಲಂಕಾ ವಿರುದ್ದ ಏಕದಿನ ಪಂದ್ಯ: ಗೆದ್ದು ಬೀಗಿದ ಭಾರತೀಯ ವನಿತೆಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳ ಅಂತರದ ಗೆಲುವು ಸಾಧಿಸಿತು.
ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಶ್ರೀಲಂಕಾ ತಂಡ 48.2 ಓವರ್​​​ಗಳಲ್ಲಿ 10 ವಿಕೆಟ್ ​​ನಷ್ಟಕ್ಕೆ 171ರನ್ ​​ಗಳಿಸಲಷ್ಟೇ ಶಕ್ತವಾಯಿತು.
172 ರನ್​ಗಳ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಸ್ಮೃತಿ ಮಂದಾನಾ(4) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಭಾಟಿಯಾ(1) ರನ್​ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಒಂದಾದ ಶೆಫಾಲಿ ವರ್ಮಾ(35) ಹಾಗೂ ನಾಯಕಿ ಹರ್ಮನ್​ಪ್ರೀತ್ ಕೌರ್(44) ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ಹರ್ಲಿನ್​(34), ದೀಪ್ತಿ ಶರ್ಮಾ ಅಜೇಯ(22)ರನ್ ಪೇರಿಸಿದರು.
ಕೊನೆಯದಾಗಿ ವಸ್ತ್ರಕರ್ 21ರನ್​ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಂಡ 38 ಓವರ್​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್​ಗಳಿಸಿ, ಗೆಲುವಿನ ನಗೆ ಬೀರಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!