ಶ್ರೀಲಂಕನ್ ಏರ್‌ಲೈನ್ಸ್ ಫಾರ್ ಸೇಲ್: ಆರ್ಥಿಕ ಚೇತರಿಕೆಗೆ ಸಿಂಘೆ ಸರ್ಕಾರ ಸರ್ಕಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಹದೆಗೆಟ್ಟಿರುವ ಆರ್ಥಿಕ ಸ್ಥಿತಿ ಸುಧಾರಿಸಲು ಲಂಕೆ ಹೊಸ ಹಾದಿ ಹಿಡಿದಿದೆ.
ಸರ್ಕಾರಿ ಸ್ವಾಮ್ಯದಲ್ಲಿರುವ ವೈಮಾನಿಕ ಸಂಸ್ಥೆಯನ್ನು ಖಾಸಗಿಯವರಿಗೆ ಮಾರಾಟ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಈ ಬಗ್ಗೆ ಟೀವಿ ವಾಹಿನಿಯಲ್ಲಿ ದೇಶದ ಜನತೆ ಜೊತೆ ಮಾತನಾಡಿರುವ ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ದೇಶದ ಆರ್ಥಿಕತೆ ಅನಿಶ್ಚಿತವಾಗಿದೆ. ಮುಕ್ತ ಮಾರುಕಟ್ಟೆಯ ಮೂಲಕ ಡಾಲರ್ ಸಂಗ್ರಹಿಸಲು ಯತ್ನಿಸುತ್ತಿದ್ದೇವೆ ಎಂದಿದ್ದಾರೆ.
ಸರ್ಕಾರಿ ನೌಕರರಿಗೆ ವೇತನ ನೀಡುವುದೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸದಾಗಿ ನಗದು ಹಣ ಮುದ್ರಿಸಲು ನಿರ್ಧರಿಸಲಾಗಿದೆ. ಇದಲ್ಲದೆ ಕಳೆದ ಹಣಕಾಸು ವರ್ಷದಲ್ಲಿ ವಿಮಾನಯಾನ ಸಂಸ್ಥೆ 45 ಶತಕೋಟಿ ಶ್ರೀಲಂಕಾ ರೂಪಾಯಿಗಳ ನಷ್ಟ ಅನುಭವಿಸಿದೆ. ವಿಮಾನದಲ್ಲಿ ಕಾಲಿಡದ ಈ ದೇಶದ ಬಡ ಜನತೆಯ ಮೇಲೆ ಈ ನಷ್ಟ ಹೇರುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಸಂಸ್ಥೆಯ ಖಾಸಗೀಕರಣದ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಮೂರು ಹಡಗುಗಳನ್ನು ತರಿಸಲು ಮುಕ್ತ ಮಾರುಕಟ್ಟೆಯ ಮೂಲಕ ಡಾಲರ್ ಸಂಗ್ರಹಿಸುವ ಯತ್ನವೂ ಸಾಗಿದೆ ಎಂದು ಸಿಂಘೆ ಇದೇ ಸಂದರ್ಭ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!