ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಗೆಲುವಿನ ನಗೆ ಬೀರಿದ ವಿಕ್ರಮಸಿಂಘೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಬಿಕ್ಕಟ್ಟಿನ ವಿರುದ್ಧ ದೇಶದಾದ್ಯಂತ್‌ ನಡೆಯುತ್ತಿರುವ ವಿರೋಧದ ನಡುವೆಯೇ ಅಧ್ಯಕ್ಷೀಯ ಚುನಾವಣೆಯಲ್ಲಿ ರಾನಿಲ್‌ ವಿಕ್ರಮಸಿಂಘೇ ಗೆಲುವು ಸಾಧಿಸಿದ್ದಾರೆ. ಗೋಟಬಾಯಾ ರಾಜಪಕ್ಸೆಯವರ ರಾಜೀನಾಮೆಯ ನಂತರ ಹಂಗಾಮಿ ಅಧ್ಯಕ್ಷರಾಗಿ ವಿಕ್ರಮಸಿಂಘೇ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಆದರೆ ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಕ್ರಮಸಿಂಘೇ ಗೆಲುವುಸಾಧಿಸುವ ಮೂಲಕ ಮತ್ತೊಮ್ಮೆ ಲಂಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಆರು ಬಾರಿ ಅವರು ಶ್ರೀಲಂಕಾದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಭಿನ್ನಮತೀಯ ನಾಯಕ ಡಲ್ಲಾಸ್ ಅಲಹಪ್ಪೆರುಮಾ ಮತ್ತು ಎಡಪಂಥೀಯ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ದಿಸಾನಾಯಕೆ ಅವರನ್ನು ಸೋಲಿಸಿದ ಸಿಂಘೇ, ಗೊಟಬಯ ರಾಜಪಕ್ಸೆ ಅವರ ಉತ್ತರಾಧಿಕಾರಿಯಾಗಿದ್ದಾರೆ.

225 ಸದಸ್ಯರ ಸದನದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಯು ಕನಿಷ್ಠ 113 ಮತಗಳನ್ನು ಗಳಿಸಬೇಕಾಗಿತ್ತು. ವಿಕ್ರಮಸಿಂಘೇ 134 ಮತಗಳನ್ನು ಗಳಿಸಿದರೆ, ಅವರ ಸಮೀಪದ ಪ್ರತಿಸ್ಪರ್ಧಿ ಅಲಹಪ್ಪೆರುಮಾ ಅವರು 82 ಪಡೆದರು. ದಿಸಾನಾಯಕ ಕೇವಲ ಮೂರು ಮತಗಳನ್ನು ಪಡೆದರು. ಈ ಆಧಾರದ ಮೇಲೆ ನವೆಂಬರ್ 2024 ರಲ್ಲಿ ಕೊನೆಗೊಳ್ಳುವ ರಾಜಪಕ್ಸೆ ಅವರ ಉಳಿದ ಅವಧಿಯನ್ನು ಪೂರೈಸಲು ವಿಕ್ರಮಸಿಂಘೆ ಅವರೇ ಅರ್ಹತೆ ಹೊಂದಿರುತ್ತಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!