ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಾರ ಪಾಂಡಿತ್ಯವನ್ನು ಹೊಂದಿದ ದೈವಜ್ಞ ವಳಕ್ಕುಂಜ ವೆಂಕಟರಮಣ ಭಟ್ಟರಿಗೆ ಶ್ರೀ ರಾಘವೇಂದ್ರಭಾರತೀ ಪಾಂಡಿತ್ಯ ಪುರಸ್ಕಾರ ಲಭಿಸಿದೆ. ಕರ್ನಾಟಕದ ಕೆಕ್ಕಾರು ಶ್ರೀ ರಘೂತ್ತಮ ಮಠದಲ್ಲಿ ಶನಿವಾರ ಜರಗಿದ ಶ್ರೀರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಪ್ರಶಸ್ತಿಯನ್ನು ಅನುಗ್ರಹಿಸಿ ಆಶೀರ್ವದಿಸಿದರು. ದೈವಜ್ಞ ವಳಕ್ಕುಂಜ ವೆಂಕಟರಮಣ ಭಟ್ಟರು ಕೇರಳ ಹಾಗೂ ಕರ್ನಾಟಕದ ವಿವಿಧೆಡೆಗಳಲ್ಲಿ ಪ್ರಶ್ನೆಚಿಂತನೆಯಲ್ಲಿ ಭಾಗವಹಿಸಿ ಪ್ರಸಿದ್ಧಿಯನ್ನು ಹೊಂದಿರುತ್ತಾರೆ. ನಾಡಿನ ಅನೇಕ ಜನರು ಅವರ ಮನೆಗೆ ತೆರಳಿ ತಮ್ಮ ಸಮಸ್ಯೆಗಳಿಗೆ ಜ್ಯೋತಿಷ್ಯ ಚಿಂತನೆಯ ಮೂಲಕ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅನೇಕ ಶಿಷ್ಯವೃಂದವನ್ನೂ ಹೊಂದಿರುವ ಅವರು ಬದಿಯಡ್ಕ ಪಳ್ಳತ್ತಡ್ಕ ಸಮೀಪ ವಳಕ್ಕುಂಜದಲ್ಲಿ ವಾಸವಾಗಿದ್ದಾರೆ.