Tuesday, August 9, 2022

Latest Posts

ಶ್ರೀ ಮಾಧವ ಗೋ ಶಾಲೆಗೆ ಸ್ಟಾರ್ಟ್ ಅಪ್ ಐಡಿಯಾ ಪ್ರಶಸ್ತಿ

ಹೊಸದಿಗಂತ ವರದಿ, ಕಲಬುರಗಿ:

ನಿರಾಶ್ರಿತ, ರೋಗಗ್ರಸ್ತ ಗೋವುಗಳ ಸೇವೆಯಲ್ಲಿ ತೊಡಗಿಕೊಂಡಿರುವ ಕಲಬುರಗಿಯ ಶ್ರೀ ಮಾಧವ ಗೋಶಾಲೆಗೆ ಮನೋಮಯ ಸ್ಟುಡಿಯೋಸ್ ಹಾಗು ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಆಯೋಜಿಸಲಾದ ಕಲಬುರಗಿ ಥಿಂಕ್ಯಾಥಾನ್ ಸ್ಟಾರ್ಟಪ್ ಎಕ್ಸಪೊ – 2021 ರಲ್ಲಿ ಮೂರನೇ ಅತ್ಯುತ್ತಮ ಸ್ಟಾರ್ಟಪ್ ಐಡಿಯಾ ಪ್ರಶಸ್ತಿ ಲಭಿಸಿದೆ.

ಒಟ್ಟು 35 ನವೋದ್ಯಮಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮಾಧವ ಗೋಶಾಲೆಯ ಸಮಾಜಮುಖಿ ಕಾರ್ಯ, ಉದ್ಯೋಗ ಸೃಷ್ಟಿ, ಗುಣಮಟ್ಟದ ಪಂಚಗವ್ಯ ಉತ್ಪನ್ನಗಳು ಹಾಗು ಗೋವುಗಳ ಚಿಕಿತ್ಸೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಗೋಶಾಲೆಯನ್ನು ನವೋದ್ಯಮದ ರೂಪದಲ್ಲಿ ಪ್ರಸ್ತುತ ಪಡಿಸಿರುವ ಶ್ರೀ ಮಾಧವ ಗೋಶಾಲೆಯು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಏಕೈಕ ಗೋಶಾಲೆಯಾಗಿದೆ.

ನವೋದ್ಯಮಗಳಿಗೆ ಉತ್ತೇಜನ ಮತ್ತು ಸಹಕಾರ ನೀಡಲು ಆಯೋಜಿಸಲಾದ ಕಲ್ಯಾಣ ಕರ್ನಾಟಕದ ಮೊಟ್ಟಮೊದಲ ಕಾರ್ಯಕ್ರಮ ಇದಾಗಿದೆ‌. ದೇಶದ ಬೇರೆ ಬೇರೆ ರಾಜ್ಯಗಳಿಂದ ಉದ್ದಿಮೆದಾರರು, ಹೂಡಿಕೆದಾರರು ಹಾಗು ಸಣ್ಣ ಕೈಗಾರಿಕಾ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss