ಸಂಭಾವನೆ ಹೆಚ್ಚಿಸಿ ಕೈ ಸುಟ್ಟುಕೊಂಡ್ರಾ ಕೆಜಿಎಫ್‌ ಬೆಡಗಿ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಯಾಂಡಲ್‌ವುಡ್‌ ಘನತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸವಂತೆ ಮಾಡಿದ ಕೆಜಿಎಫ್‌, ಕೆಜಿಎಫ್-‌2 ಚಿತ್ರ ಯಾವ ರೇಂಜ್‌ಗೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆಂತು ಎಲ್ಲರಿಗೂ ತಿಳಿದರುವ ವಿಷಯ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ಕೂಡ ಒಮ್ಮೆಲೆ ಸ್ಟಾರ್‌ ಹಿರೋಯಿನ್‌ ಪಟ್ಟಿಗೆ ಸೇರಿದರು. ಈ ಫೇಮ್‌ನಿಂದಾಗಿಯೇ ತಮ್ಮ ಸಂಭಾವನೆಯನ್ನು ಹೆಚ್ಚಸಿಕೊಂಡಿದ್ದಾರೆ.

ಆದರೆ ನಿಜವಾದ ಸಮಸ್ಯೆ ಆಗಿದ್ದು ಇಲ್ಲಿಯೇ. ಕೆಜಿಎಫ್‌ ಬಳಿಕ ಹೀರೋ ಯಶ್ ಈಗಷ್ಟೇ ತಮ್ಮ ಮುಂದಿನ ಚಿತ್ರದ ಕೆಲಸ ಶುರು ಮಾಡಿದ್ದಾರೆ. ಆದರೆ ನಾಯಕಿ ಶ್ರೀನಿಧಿಗೆ ತಮ್ಮ ಮುಂದಿನ ಸಿನಿಮಾವನ್ನು ಇನ್ನೂ ಓಕೆ ಮಾಡಲು ಸಹ ಸಾಧ್ಯವಾಗಿಲ್ಲ. ಇದಕ್ಕೆ ಬಲವಾದ ಕಾರಣ ಆಕೆ ತನ್ನ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿರುವುದು. ಶ್ರೀನಿಧಿ ತನ್ನ ಸಂಭಾವನೆಯನ್ನು ಅನಿರೀಕ್ಷಿತವಾಗಿ ಹೆಚ್ಚಳ ಮಾಡಿದ್ದರಿಂದ ನಿರ್ಮಾಪಕರು ಆಕೆ ಜೊತೆ ಸಿನಿಮಾ ಮಾಡಲು ಹಿಂದೆ ಮುಂದೆ ತುಳಿಯುತಿದ್ದಾರಂತೆ.

ಈಗಾಗಲೇ ಹಲವಾರು ಸಿನಿಮಾಗಳಿಗೆ ಆಫರ್‌ ಬಂದು ಹೋಗುತ್ತಿವೆ. ಆದರೆ ರೆಮ್ಯುನರೇಷನ್‌ ಹೆಚ್ಚಳದಿಂದಾಗಿ ಯಾವುದೇ ಕೈಗೆಟುಕುತ್ತಿಲ್ಲ. ಶ್ರೀನಿಧಿ ಶೆಟ್ಟಿ ಸಂಭಾವನೆಯನ್ನು ಕಡಿಮೆ ಮಾಡದಿದ್ದರೆ ಸಿನಿಮಾ ಅವಕಾಶಗಳು ಸಿಗುವುದು ತುಂಬಾ ಕಷ್ಟ ಅಂತಿದೆ ಸ್ಯಾಂಡಲ್ ವುಡ್ ಮೂಲಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!