Monday, July 4, 2022

Latest Posts

ಶ್ರೀರಂಗಪಟ್ಟಣ ಜಂಬೂಸವಾರಿ ಉತ್ಸವ ವೇಳೆ ಬೆದರಿದ ಆನೆ: ತಪ್ಪಿದ ಭಾರೀ ಅನಾಹುತ

ಹೊಸ ದಿಗಂತ ವರದಿ, ಶ್ರೀರಂಗಪಟ್ಟಣ :

ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಜಂಬೂ ಸವಾರಿ ಉತ್ಸವ ಸಂಪೂರ್ಣ ವಿಫಲವಾಗಿದ್ದು , ತಮಟೆ, ಪಟಾಕಿ ಸದ್ದಿನಿಂದ ಆನೆ ಬೆದರಿ ಜನರತ್ತ ಧಾವಿಸಿತ್ತಾದರೂ, ಮಾವುತರ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಏಕಾಏಕಿ ಆನೆ ತರಿಸಿ, ಜಂಬೂಸವಾರಿಗೆ ಸಿದ್ಧತೆ ನಡೆಸಿದ್ದ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದುದು ಕಂಡುಬಂತು.
ಕಿರಂಗೂರು ಬನ್ನಿಮಂಟಪದ ಬಳಿ ದಸರಾ ನಡೆಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆನೆ ತರಿಸದೆ ಈ ಬಾರಿ ಕೇವಲ ಚಿನ್ನದ ರಥದಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಯ ಮೆರವಣಿಗೆ ನಡೆಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನೂ ಕೈಗೊಂಡಿತ್ತು. ಕೊನೇ ಗಳಿಗೇಯಲ್ಲಿ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಮೈಸೂರಿನಿಂದ ಗೋಪಾಲಸ್ವಾಮಿ ಎಂಬ ಆನೆಯನ್ನು ತರಿಸಿ ಜಂಬೂಸವಾರಿ ಉತ್ಸವಕ್ಕೆ ಸಿದ್ದತೆ ನಡೆಸಿತ್ತು. ಪೂರ್ವಸಿದ್ಧತಾ ಕೊರತೆಯಿಂದ ಈ ಅನಾಹುತ ನಡೆದಿದ್ದು , ಯಾವುದೇ ಹಾನಿ ಸಂಭವಿಸಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss