spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶ್ರೀಶೈಲ ಪೀಠದ ಅಭಿವೃದ್ಧಿಗೆ 10 ಎಕರೆ ಜಮೀನು ಮಂಜೂರು

- Advertisement -Nitte

ಹೊಸದಿಗಂತ ವರದಿ, ಕಲಬುರಗಿ:

ಸುಕ್ಷೇತ್ರ ಶ್ರೀಶೈಲ ಪೀಠದ ಅಭಿವೃದ್ಧಿಗಾಗಿ 10 ಎಕರೆ ಜಮೀನನ್ನು ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಜಗನ್ ಮೋಹನ ರೆಡ್ಡಿ ಅವರು ಮಂಜೂರು ಮಾಡುವ ಮೂಲಕ ಶ್ರೀಶೈಲ ಜಗದ್ಗುರುಗಳ ಆಶೀರ್ವಾದ ಹಾಗೂ ಶ್ರೀರಕ್ಷೆಗೆ ಪಾತ್ರರಾಗಿದ್ದಾರೆ ಎಂದು ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರದ ಶಾಸಕರಾದ ಶಿಲ್ಪಾ ಚಕ್ರಪಾಣಿ ರೆಡ್ಡಿ ಅವರ ವಿಶೇಷ ಪ್ರಯತ್ನದಿಂದಾಗಿ ಆಂಧ್ರ ಪ್ರದೇಶ ರಾಜ್ಯ ಸರ್ಕಾರ 10 ಎಕರೆ ಜಮೀನನ್ನು ಮಂಜೂರು ಮಾಡಿದ್ದು,ಈ ಸುಕ್ಷೇತ್ರದ ಪೀಠದ ಅಭಿವೃದ್ಧಿಗೆ ಪೂರಕವಾಗಲಿದೆ. ಶ್ರೀಶೈಲ ಪೀಠದ ಇತಿಹಾಸದಲ್ಲಿಯೇ ಒಂದು ಮಹತ್ತರವಾದ ಸಾಧನೆಯಾಗಿದೆ ಎಂದರು.
ಪರಮ ಪೂಜ್ಯ ಶ್ರೀಶೈಲ ಜಗದ್ಗುರುಗಳ ಪೂಜಾಫಲ, ಜಗದ್ಗುರು ರೇಣುಕರ, ಜಗದ್ಗುರು ಪಂಡಿತಾರಾಧ್ಯರ, ಭ್ರವiರಾಂಬ ಸಹಿತ ಶ್ರೀಶೈಲ ಮಲ್ಲಿಕಾರ್ಜುನರು ಮತ್ತು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಆಶೀರ್ವಾದ, ಶ್ರೀರಕ್ಷೆ ಮುಖ್ಯ ಮಂತ್ರಿ ಜಗನ ಮೋಹನ್ ರೆಡ್ಡಿ ಮತ್ತು ಶಾಸಕರಾದ ಶಿಲ್ಪಾ ರೆಡ್ಡಿ ಇವರ ಮೇಲೆ ಇರಲಿ ಎಂದು ಪೀಠದ ಸದ್ಭಕ್ತರು ಪ್ರಾರ್ಥಿಸಿದ್ದಾರೆ ಎಂದು ಆಲಗೂಡಕರ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss