Monday, August 15, 2022

Latest Posts

ಲವ್ ಜಿಹಾದ್ ಕೃತ್ಯಗಳನ್ನು ಖಂಡಿಸಿ ಎಸ್.ಎಸ್. ಕೆ. ಸಮಾಜ ಚಿಂತನ ಮಂಥನ ಸಮಿತಿ ಪ್ರತಿಭಟನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಹುಬ್ಬಳ್ಳಿ:

ಹಿಂದೂ ಧರ್ಮದ ಯುವಕ ಮತ್ತು ಯುವತಿಯರನ್ನು ತಮ್ಮ ಪ್ರೇಮಪಾಶದಲ್ಲಿ ಸಿಲುಕಿಸಿ, ಮಾನಸಿಕವಾಗಿ ಕುಗ್ಗಿಸಿ, ಅವರ ಮೇಲೆ ನಿರಂತರ ಶೋಷಣೆ, ಮತಾಂತರ ಮಾಡಿಕೊಳ್ಳಲು ಒತ್ತಾಯಿಸುವುದನ್ನು ಕೃತ್ಯಗನ್ನು ಖಂಡಿಸಿ ಇಲ್ಲಿಯ ಎಸ್.ಎಸ್. ಕೆ. ಸಮಾಜ ಚಿಂತನ ಮಂಥನ ಸಮಿತಿ ಪ್ರತಿಭಟನೆ ನಡೆಸಿತು.

ನಗರದ ಮಿನಿ ವಿಧಾನಸೌದದ ಎದುರು ಹಿಂದೂ ವಿರೋಧಿಗಳು ಮಾಡುತ್ತಿರುವ ಜಿಹಾದ್ ತನಿಖೆ ಮಾಡಬೇಕು ಎಂದು ತಹಶೀಲ್ದಾರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಂತರ ಸಮಿತಿಯ ರಾಘವೇಂದ್ರ ಬಾಂಡಗೆ ಮಾತನಾಡಿ, ದೇಶದ ಹಿಂದೂ ಯುವಕ, ಯುವತಿಯರ ಮೇಲೆ ಶೋಷಣೆ ಹೆಚ್ಚಾಗುತ್ತಿವೆ. ಪ್ರೀತಿಯೆಂಬ ಅಂಶದಿಂದ ಬಲೆ ಬಿಸಿ ಮತಾಂತರ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸರ್ಕಾರದ ಗಮನಿಸಿ ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಲವ್ ಜಿಹಾದ್ ಬೇರು ಸಮೇತ ಕಿತ್ತು ಹಾಕಬೇಕು ಇಲ್ಲವಾದರೆ ನಮ್ಮ ಸಮಾಜ ವತಿಯಿಂದ ಉಗ್ರವಾದ ಹೋರಾಟ ಮಾಡುತ್ತೆವೆ ಎಂದರು.

ಈ ಸಂದರ್ಭದಲ್ಲಿ ಹನುಮಂತ ಸಾ ನಿರಂಜನ, ಲಕ್ಷ್ಮಣ ದಲಮಜನ್, ಶ್ರೀಕಾಂತ್ ಹಬಿಬ್, ಹರೀಶ ಜರತಾರಘರ, ರೋಹಿತ ಹಬಿಬ್, ವಸಂತ ಮಾರವಾಡಿ, ಶೋಭಾ ನಾಕೋಡ, ರಾಜೇಶ್ವರಿ ಜಡಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss