RRR- 2 ಚಿತ್ರ ಘೋಷಿಸಿದ ಸಿನಿ ಮಾಂತ್ರಿಕ ರಾಜಮೌಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದ್ದ ಆರ್‌ಆರ್‌ಆರ್ ಚಿತ್ರದ ಸೀಕ್ವೆಲ್‌ ಬರುವುದು ಖಚಿತವಾಗಿದೆ. ಈ  ವಿಚಾರವನ್ನು ಸ್ವತಃ ಎಸ್‌.ಎಸ್.ರಾಜಮೌಳಿ ಖಚಿತಪಡಿಸಿದ್ದಾರೆ. ಮತ್ತು ತಮ್ಮ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಪಾರ್ಟ್‌ -2 ಕಥೆ ವಿಚಾರವಾಗಿ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಬಾಹುಬಲಿ ಚಿತ್ರಗಳ ಯಶಸ್ಸಿನ ನಂತರ ಎಸ್‌ಎಸ್ ರಾಜಮೌಳಿ ಮತ್ತೊಮ್ಮೆ ನಿರ್ದೇಶಕರಾಗಿ ಮರಳಿದ್ದ ಚಿತ್ರವಾಗಿ RRR ಮೂಡಿಬಂದಿತ್ತು. ಇಬ್ಬರು‌ ತೆಲುಗು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮರಂ ಭೀಮ್ (ಜೂನಿಯರ್ ಎನ್ಟಿಆರ್) ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಬಿಡುಗಡೆಯಾದ ಬಳಿಕ ವಿಶ್ವಾದ್ಯಂತ ಧೂಳೆಬ್ಬಿಸಿದ್ದ ಚಿತ್ರ ₹1,100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇತ್ತೀಚೆಗೆ ಜಪಾನ್‌ನಲ್ಲಿ ಬಿಡುಗಡೆಯಾಗಿದ್ದ ಚಿತ್ರ ಆ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಭಾರತೀಯ ಚಲನಚಿತ್ರವೆಂಬ ಖ್ಯಾತಿಗೂ ಭಾಜನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!