JOB| ಸಶಸ್ತ್ರ ಸೀಮಾ ಬಲದಲ್ಲಿ 742 ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಶಸ್ತ್ರ ಸೀಮಾ ಬಲದಲ್ಲಿ 742 ಕಾನ್ಸ್‌ಟೇಬಲ್‌ (ಕಾರ್ಪೆಂಟರ್, ಬ್ಲಾಕ್‌ಸ್ಮಿತ್, ಡ್ರೈವರ್, ಟೇಲರ್, ಗಾರ್ಡೆನರ್, ಕಾಬ್ಲರ್, ವೆಟರಿನರಿ, ಬಾರ್ಬರ್, ಸಫಾಯಿವಾಲಾ) ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಗ್ರೂಪ್‌ ಸಿ ನಾನ್‌-ಗೆಜೆಟೆಡ್ ಹುದ್ದೆಗಳು ಇವಾಗಿದ್ದು, ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಅಧೀನದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಪದವಿ, ಡಿಪ್ಲೋಮಾ, 10ನೇ ತರಗತಿ, 12ನೇ ತರಗತಿ ವಿದ್ಯಾರ್ಹತೆ ಜೊತೆಗೆ ಕನಿಷ್ಟ 18 ರಿಂದ ಗರಿಷ್ಟ 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,700/- ರಿಂದ 1,77,500/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಜೂನ್‌ 10,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!