ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ 1207 ಸ್ಟೆನೋಗ್ರಾಫರ್ ಗ್ರೇಡ್ ʼಸಿʼ ಮತ್ತು ʼಡಿʼ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ 10 + 2 ಉತ್ತೀರ್ಣರಾಗಿರಬೇಕು. ಅಲ್ಲದೆ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗಳಿಗೆ ಕನಿಷ್ಟ 18 ರಿಂದ ಗರಿಷ್ಟ 30 ವರ್ಷ ಮತ್ತು ಸ್ಟೆನೋಗ್ರಾಫರ್ ಡಿ ಹುದ್ದೆಗಳಿಗೆ ಕನಿಷ್ಟ 17 ರಿಂದ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ, ಮೂಲಕ ಆಯ್ಕೆ ಮಾಡಲಾಗುವುದು. ಸ್ಟೆನೋಗ್ರಾಫರ್ ಗ್ರೇಡ್ ʼಸಿʼ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 9,300/- ರಿಂದ 34,800/ರೂ ಮತ್ತು ಗ್ರೇಡ್ ಡಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 5,200/- ರಿಂದ 20,200/-ರೂ ವೇತನವನ್ನು ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆಗಸ್ಟ್ 23,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.