Monday, August 8, 2022

Latest Posts

ಎಸ್ಎಸ್ಎಲ್ ಸಿ ಪರೀಕ್ಷೆ: ಕಾಸರಗೋಡು ಜಿಲ್ಲೆಗೆ ಶೇಕಡಾ 99.74 ಫಲಿತಾಂಶ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳ ಎಸ್ಎಸ್ಎಲ್ ಸಿ ಫಲಿತಾಂಶವು ಬುಧವಾರ ಅಪರಾಹ್ನ ಪ್ರಕಟಗೊಂಡಿದ್ದು , ಕಾಸರಗೋಡು ಜಿಲ್ಲೆಗೆ ಶೇಕಡಾ 99.74 ಫಲಿತಾಂಶ ಲಭಿಸಿದೆ. ಜಿಲ್ಲೆಯ 4366 ಮಂದಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ದೊರಕಿದೆ.
ಕಳೆದ ವರ್ಷದ ಎಸ್ಎಸ್ಎಲ್ ಸಿ ಫಲಿತಾಂಶಕ್ಕಿಂತ ಈ ಬಾರಿ ಶೇಕಡಾ 1.13 ಅಧಿಕವಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆಗೆ 19,621 ಮಂದಿ ಹಾಜರಾಗಿದ್ದು , ಇವರಲ್ಲಿ 10,582 ಮಂದಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಈ ಪೈಕಿ 5546 ವಿದ್ಯಾರ್ಥಿಗಳು, 5036 ಮಂದಿ ವಿದ್ಯಾರ್ಥಿನಿಯರು ಸೇರಿದ್ದಾರೆ.
ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ ಶೇಕಡಾ 99.87 ಫಲಿತಾಂಶ ಬಂದಿದ್ದು , ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ಶೇಕಡಾ 99.63 ಫಲಿತಾಂಶ ಲಭಿಸಿದೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10,621 ಮಂದಿ ಪರೀಕ್ಷೆಗೆ ಹಾಜರಾಗಿದ್ದು , 10,582 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಇವರಲ್ಲಿ 5546 ಮಂದಿ ಹುಡುಗರು, 5036 ಮಂದಿ ಹುಡುಗಿಯರು ಒಳಗೊಂಡಿದ್ದಾರೆ. ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ 8716 ಮಂದಿ ಪರೀಕ್ಷೆಗೆ ಹಾಜರಾಗಿದ್ದು , 8705 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಇವರಲ್ಲಿ 4464 ಮಂದಿ ಹುಡುಗರು, 4241 ಮಂದಿ ಹುಡುಗಿಯರು ಆಗಿದ್ದಾರೆ. ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ 2557 ಮಂದಿ, ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 1809 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗಳಿಸಿದ್ದಾರೆ.

131 ಶಿಕ್ಷಣಾಲಯಗಳಿಗೆ ಶೇಕಡಾ 100 ಫಲಿತಾಂಶ
ಕಾಸರಗೋಡು ಜಿಲ್ಲೆಯಲ್ಲಿ 131 ಶಿಕ್ಷಣಾಲಯಗಳಿಗೆ ಶೇಕಡಾ 100 ಫಲಿತಾಂಶ ಬಂದಿದೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 35 ಸರಕಾರಿ, 10 ಅನುದಾನಿತ, 18 ಅನುದಾನ ರಹಿತ ಶಾಲೆಗಳಿಗೆ ಶೇಕಡಾ 100 ಫಲಿತಾಂಶ ಲಭಿಸಿದೆ. ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ 50 ಸರಕಾರಿ, 10 ಅನುದಾನಿತ, 8 ಅನುದಾನ ರಹಿತ ಶಾಲೆಗಳಿಗೆ ಶೇಕಡಾ 100 ಫಲಿತಾಂಶ ಬಂದಿದೆ. ಕಾಸರಗೋಡು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡಾ 1.13 ಫಲಿತಾಂಶದಲ್ಲಿ ಹೆಚ್ಚಳವುಂಟಾಗಿದೆ. ಕಳೆದ ಬಾರಿ ಶೇಕಡಾ 98.61 ಫಲಿತಾಂಶ ಬಂದಿತ್ತು. ಈ ಬಾರಿ ಅದು ಶೇಕಡಾ 99.74 ಆಗಿ ಅಧಿಕಗೊಂಡಿದೆ. ಕಳೆದ ಬಾರಿ 1685 ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಲಭಿಸಿತ್ತು. ಈ ಬಾರಿ 4366 ಮಂದಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss