spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 26, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ: ಸವಿತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

- Advertisement -Nitte

ಹೊಸ ದಿಗಂತ ವರದಿ,  ಚಿಕ್ಕಮಗಳೂರು:

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿರುವ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಸವಿತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಗರದ ಸವಿತಾ ಸಮಾಜ ಟ್ರಸ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮೈಲಿಮನೆ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಶೋಕ್ ಉದ್ಘಾಟಿಸಿ ಮಾತನಾಡಿ, ಸವಿತಾ ಸಮಾಜದ ಏಳಿಗೆಗೆ ಪ್ರಮುಖ ಅಸ್ತ್ರ ಶಿಕ್ಷಣ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಮಾಡಲು ಶ್ರಮವಹಿಸಬೇಕು. ಸಮಾಜವು ತಳಮಟ್ಟದಿಂದ ಸಂಘಟನೆಗೊಳ್ಳಬೇಕು ಎಂದರು.
ಸವಿತಾ ಸಮಾಜದ ಅಭಿಮಾನ ಹೊಂದಿದಾಗ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಿದೆ. ಜನನದಿಂದ ಮರಣದವರೆಗೂ ನಮ್ಮ ಸಮಾಜ ಎಲ್ಲಾ ವರ್ಗದವರಿಗೂ ಅವಶ್ಯಕತೆ ಇದೆ. ನಮ್ಮ ಸಮಾಜದಲ್ಲಿರುವ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು. ಅಲ್ಲದೇ, ಆ ಪ್ರತಿಭೆಗಳಿಗೆ p ನೀಡಲು ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡಲಿವೆ ಎಂದರು.
ಸವಿತಾ ಸಮಾಜ ಸೇವಾ ಟ್ರಸ್ಟ್‍ನ ಅಧ್ಯಕ್ಷ ಶ್ರೀಧರ್ ಮಾತನಾಡಿ ಕಾಯಕದೊಂದಿಗೆ ಮಕ್ಕಳಿಗೆ ಶಿಕ್ಷಣ ದೊರಕಿಸುವ ಮೂಲಕ ಸವಿತ ಸಮಾಜವನ್ನು ಮುಖ್ಯವಾನಿಗೆ ತರಲು ಸಮಾಜದ ಬಂಧುಗಳು ಸಹಕರಿಸಬೇಕು ಎಂದರು.
ನಮ್ಮ ಸಮಾಜದ ಇತಿಹಾಸ, ಪರಂಪರೆ ಅರಿತು ನಮ್ಮಲ್ಲಿ ಬೇರೂರಿರುವ ಅಜ್ಞಾನ, ಕೀಳರಿಮೆಯಿಂದ ಹೊರಬಂದು ಸ್ವಾಭಿಮಾನಿಗಳಾಗಿ ಬದುಕಬೇಕು, ಈ ನಿಟ್ಟಿನಲ್ಲಿ ಸಮುದಾಯದ ಜಾಗೃತಿ ಹಾಗೂ ಸಂಘಟನೆಯ ಅಗತ್ಯವಿದೆ ಎಂದು ತಿಳಿಸಿದರು.
ಸಮುದಾಯ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಸಮುದಾಯದ ಬಂಧುಗಳು ನೆರವು ನೀಡಿದ್ದಾರೆ. 1 ರಿಂದ 10 ನೇ ತರಗತಿಯ 70 ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ, ಹಾಗೂ ಎಸ್.ಎಸ್.ಎಲ್.ಸಿ. ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ನಾಗರಾಜ್, ಸಹಕಾರ್ಯದರ್ಶಿ ಅಶ್ವಿನ್, ಖಜಾಂಚಿ ಯೋಗೇಶ್, ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಶ್ರೀಧರ್ ಮೋಹನ್, ಸೇರಿದಂತೆ ಮತ್ತಿತರರು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss