spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

BIG NEWS | ಎಸ್.ಎಸ್.ಎಲ್.ಸಿ. ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಎಸ್.ಎಸ್.ಎಲ್.ಸಿ. ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟಗೊಂಡಿದ್ದು, ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆಯನ್ನು ಬೋರ್ಡ್ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಪರೀಕ್ಷಾ ಮಂಡಳಿಯ ವೆಬ್​ಸೈಟ್ www.sslc.Karnataka.gov.in ನಲ್ಲಿ ಪ್ರಕಟವಾಗಿದೆ. ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಪ್ರಕಟವಾಗಿದೆ. ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು, ಮೂರು ಗಂಟೆಗಳ ಕಾಲ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಯಾಗಿದ್ದು, ಉತ್ತರಗಳನ್ನು ಒಎಂಆರ್( OMR) ಶೀಟ್​​ನಲ್ಲಿ ನಮೂದಿಸಬೇಕು. ಒಎಂಆರ್ ಶೀಟ್ ಮಾದರಿಯೂ ಪ್ರಕಟವಾಗಿದ್ದು, ಇನ್ನೆರಡು ದಿನದಲ್ಲಿ ಮಾತೃಭಾಷೆ ಸೇರಿ ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಪ್ರಕಟವಾಗಲಿದೆ.
ಮಾತೃಭಾಷೆ ಸೇರಿ ಮೂರು ವಿಷಯಗಳ ಎರಡನೇ ಪ್ರಶ್ನೆ ಪತ್ರಿಕೆ ಇನ್ನು ಎರಡು ದಿನಗಳಲ್ಲಿ ಪ್ರಕಟವಾಗಲಿದ್ದು, ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಲು ಸೂಚಿಸಲಾಗಿದೆ.
ಪ್ರಶ್ನೆಪತ್ರಿಕೆ ವೆಬ್​ಸೈಟ್​​ನಲ್ಲಿ ಡೌನ್​​ಲೋಡ್ ಮಾಡಿ ಅಭ್ಯಾಸ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ. ಶಿಕ್ಷಕರಿಗೂ ಈ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಿರುವ ಅವರು, ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸುವಂತೆ ಸಲಹೆ ನೀಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss