ಅರಣ್ಯಾಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ನಟ ಮಹೇಶ್‌ ಬಾಬು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಾಲಿವುಡ್‌ ನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್‌ ನಲ್ಲಿ ಹೊಸ ಚಿತ್ರ ಮೂಡಿ ಬರಲಿದೆ.
ರಾಜಮೌಳಿ ನಿರ್ದೇಶನದ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ಹೆಚ್ಚಿನ ನಿರೀಕ್ಷೆ ಇದ್ದು, ಇದೀಗ ಹೊಸ ಪ್ಲಾನ್‌ ನೊಂದಿಗೆ ಈ ಜೋಡಿ ಒಂದಾಗಲಿದ್ದಾರೆ.
SSMB29 ಚಿತ್ರದ ಬಗ್ಗೆ ಹೊಸ ಅಪ್‌ ಡೇಟ್‌ ಸಿಕ್ಕಿದ್ದು, ಈ ಚಿತ್ರ ಅರಣ್ಯ ಆಧಾರಿತ ಹಾಗೂ ಸಾಹಸಮಯ ಚಿತ್ರವಾಗಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ನಿರ್ಮಾಪಕ ರಾಮ್‌ ಗೋಪಾಲ್‌ ವರ್ಮ ಟ್ವೀಟ್‌ ಮಾಡಿದ್ದು, ಮಹೇಶ್‌ ಬಾಬು ಅವರಿಗೆ SSMB29 ಚಿತ್ರದಲ್ಲಿ ಜೇಮ್ಸ್‌ ಬಾಂಡ್‌ ಕ್ಯಾರೆಕ್ಟರ್‌ ಕೊಡಿ. ಇದು ಆಫ್ರಿಕಾದ ಅರಣ್ಯ ಆಧಾರಿತ ಚಿತ್ರ ಎಂದು ಹೇಳಿದ್ದೀರಿ ನೀವು ಎಂದು ರಾಜಮೌಳಿ ಅವರನ್ನು ಟ್ಯಾಗ್‌ ಮಾಡಿದ್ದಾರೆ.ಈ ಚಿತ್ರಕ್ಕೆ ಕೆ.ವಿ. ವಿಜಯೇಂದ್ರ ಪ್ರಸಾದ್‌ ಚಿತ್ರಕಥೆ ಬರೆದಿದ್ದು, ಶೂಟಿಂಗ್‌ ವೇಳಾಪಟ್ಟಿ ಕುರಿತು ಮತ್ತಷ್ಟು ಮಾಹಿತಿ ಹೊರಬರಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!