Saturday, June 10, 2023

Latest Posts

ಹೊಸ ವಷಾ೯ರಣೆ ವೇಳೆ ಯುವಕನಿಗೆ ಚಾಕುವಿನಿಂದ ಇರಿತ

ಹೊಸದಿಗಂತ ವರದಿ,ಕಲಬುರಗಿ:

ಮನೆಯ ಮುಂದೆ ಸೌಂಡ್ ಬಾಕ್ಸ್ ಹಚ್ಚಿಕೊಂಡು ಹೊಸ ವಷಾ೯ಚರಣೆ ಮಾಡುತ್ತಿದ್ದ,ಯುವಕನನ್ನು ಚಾಕುವಿನಿಂದ ಇರಿದ ಘಟನೆ ಕಲಬುರಗಿ, ಲಿ ತಡರಾತ್ರಿ ನಡೆದಿದೆ.
ಕಲಬುರಗಿ ನಗರದ ಭವಾನಿ ನಗರದಲ್ಲಿ ಮಲ್ಲಿಕಾರ್ಜುನ ಎಂಬ ಯುವಕನೆ ಚಾಕುವಿನ ಇರಿತಕ್ಕೆ ಒಳಗಾದ ಯುವಕನಾಗಿದ್ದಾನೆ. ನಿನ್ನೆ ಮದ್ಯರಾತ್ರಿ 12 ಗಂಟೆ ಸುಮಾರಿಗೆ ಹೊಸ ವಷ೯ದ ಹಿನ್ನೆಲೆಯಲ್ಲಿ ಸೌಂಡ್ ಬಾಕ್ಸ್ ಹಚ್ಚಿಕೊಂಡು ಆಚರಣೆ ಮಾಡುತ್ತಿದ್ದ ವೇಳೆ ಭವಾನಿ ನಗರದ ವಿರೇಶ ಮತ್ತು ಆತನ ಸ್ನೇಹಿತರಿಂದ ಈ ಕೃತ್ಯ ನಡೆದಿದೆ.
ಸೌಂಡ್ ಬಾಕ್ಸ್ ಆಫ್ ಮಾಡುವಂತೆ ಹೇಳಿ,ದುಷ್ಕರ್ಮಿಗಳ ಸೌಂಡ್ ಸಿಸ್ಟಮ್ ಆಫ್ ಮಾಡಿ ಕೇಕ್ ಕಟ್ ಮಾಡುವುದಕ್ಕೆ ಮುಂದಾದಾಗ ಚಾಕುವಿನಿಂದ ಮಲ್ಲಿಕಾರ್ಜುನ, ನ್ನು ಇರಿದಿದ್ದಾರೆ.
ಗಾಯಗೊಂಡ ಯುವಕ ಮಲ್ಲಿಕಾರ್ಜುನ, ನನ್ನು ಕಲಬುರಗಿ, ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!