spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶಾರ್ಟ್ಸ್ ಧರಿಸಿದ್ದಕ್ಕಾಗಿ ಬ್ಯಾಂಕ್‌ ಒಳಗೆ ಪ್ರವೇಶಿಸದಂತೆ ತಡೆದ ಸಿಬ್ಬಂದಿ: ಸಿಬಿಐಯಿಂದ ಸ್ಪಷ್ಟನೆ ಕೇಳಿದ ಗ್ರಾಹಕ

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಶಾರ್ಟ್ಸ್ ಧರಿಸಿ ಹೋಗಿದ್ದಕ್ಕಾಗಿ  ಕೋಲ್ಕತ್ತ ನಿವಾಸಿ ಆಶೀಶ ಎಂಬುವವರಿಗೆ ಎಸ್‌ಬಿಐ ಬ್ಯಾಂಕ್‌ ಶಾಖೆ ಒಳಗೆ ಪ್ರವೇಶಿಸಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದ್ದಾರೆ.

ಈ ಬಗ್ಗೆ ಆಶೀಶ್‌ ಅವರು  ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮೂಲಕ ಹೇಳಿಕೊಂಡಿದ್ದು, ಇದೀಗ ಆ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಕೆಲವರು ಆಶೀಶ್‌ ಪರವಾಗಿ ಮಾತನಾಡುತ್ತಿದ್ದು, ಇನ್ನು ಕೆಲವರು ಬ್ಯಾಂಕ್‌ ಪರವಾಗಿ ಮಾತನಾಡುತ್ತಿದ್ದಾರೆ.

“ನಾನು ಶಾರ್ಟ್ಸ್ ಧರಿಸಿ ಎಸ್‌ಬಿಐ ಬ್ಯಾಂಕ್‌ ಶಾಖೆಗೆ ಹೋಗಿದ್ದೆ. ಇದೇ ಕಾರಣಕ್ಕಾಗಿ ಅಲ್ಲಿನ ಸಿಬ್ಬಂದಿ ಒಳಗೆ ಪ್ರವೇಶಿಸಲು ಬಿಡಲಿಲ್ಲ. ನಮ್ಮ ಗ್ರಾಹಕರು ಶಿಸ್ತು ಪಾಲನೆ ಮಾಡಬೇಕೆಂಬುದು ನಮ್ಮ ಆಶಯ. ದಯವಿಟ್ಟು ಪ್ಯಾಂಟ್‌ ಧರಿಸಿ ಬನ್ನಿ ಎಂದು ಹೇಳಿದರು” ಎಂದು ಟ್ವೀಟ್‌ ಮಾಡಿದ್ದಾರೆ.

“ಗ್ರಾಹಕರು ಬ್ಯಾಂಕ್‌ಗೆ ಬರುವಾಗ ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂಬುದರ ಬಗ್ಗೆ ಅಧಿಕೃತ ನೀತಿ ಇದೆಯೇ ” ಎಂದು ಪ್ರಶ್ನಿಸಿ ಎಸ್​ಬಿಐನ್ನು ಟ್ಯಾಗ್ ಮಾಡಿದ್ದಾರೆ.

ಎಸ್​ಬಿಐ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ” ನಿಮ್ಮ ಹೇಳಿರುವುದು ಅರ್ಥವಾಯಿತು ಮತ್ತು ಅದನ್ನು ನಾವು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ನೀತಿ ಅಥವಾ ನಿಗದಿತ ಡ್ರೆಸ್ ಕೋಡ್ ಇಲ್ಲ. ಅವರು ತಮ್ಮ ಆಯ್ಕೆಯ ಪ್ರಕಾರ ಬಟ್ಟೆ ಧರಿಸಬಹುದು. ದಯವಿಟ್ಟು, ನಮ್ಮ ಬ್ಯಾಂಕ್​​ನ ಯಾವ ಶಾಖೆಯಲ್ಲಿ ಹೀಗಾಯಿತು? ಅದರ ಕೋಡ್​​ ಕೊಡಿ. ನಾವು ವಿಚಾರಿಸುತ್ತೇವೆ” ಎಂದು ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss