ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಇಬ್ಬರ ಮೃತದೇಹ ಏರ್ ಲಿಫ್ಟ್ ಮೂಲಕ ಬೆಳಗಾವಿಗೆ ತಲುಪಿವೆ.
ಅರುಣ್ ಕೊಪರ್ಡೆ ಹಾಗೂ ಮಹದೇವಿ ಬಾವನೂರ್ ಅವರ ಮೃತದೇಹಗಳು ಆಗಮಿಸಿವೆ.
ಏರ್ಪೋರ್ಟ್ ನಿಂದ ನೇರವಾಗಿ ಬಿಮ್ಸ್ ಆಸ್ಪತ್ರೆಗೆ ಇಬ್ಬರ ಮೃತದೇಹಗಳನ್ನು ಸ್ಥಳಾಂತರಿಸಲಾಗುತ್ತದೆ. ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ಇಬ್ಬರು ಮೃತದೇಹಗಳನ್ನು ಸ್ಥಳಾಂತರಿಸಲಾಗುತ್ತದೆ. ಬಳಿಕ ಜಿಲ್ಲಾಡಳಿತ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಿದೆ.
ಈಗಾಗಲೇ ಏರ್ ಪೋರ್ಟ್ ಗೆ ಸಂಸದ ಜಗದೀಶ್ ಶೆಟ್ಟರ್ ಹಾಗೂ ಸರ್ಕಾರದ ಪರವಾಗಿ ಡಿಸಿ ಮಹಮ್ಮದ್ ರೋಷನ್ ಅವರು ಆಗಮಿಸಿದ್ದಾರೆ.
ಇನ್ನು ಜ್ಯೋತಿ ಹತ್ತರವಾಟ ಹಾಗೂ ಅವರ ಪುತ್ರಿ ಮೇಘಾ ಅವರ ಶವಗಳು ತಡವಾಗಿ ದೆಹಲಿ ತಲುಪಿದವು.ದೆಹಲಿಯಿಂದ ಗೋವಾಗೆ ಸಂಜೆ 6ಕ್ಕೆ ಇನ್ನೊಂದು ವಿಮಾನ ಹಾರಲಿದೆ. ತಾಯಿ, ಮಗಳ ಶವಗಳನ್ನು ಅದರಲ್ಲಿ ಗೋವಾವರೆಗೆ ವಿಮಾನದ ಮೂಲಕ ತಂದು, ಅಲ್ಲಿಂದ ಆಂಬುಲೆನ್ಸ್ ಮೂಲಕ ಬೆಳಗಾವಿಗೆ ತರಲಾಗುವುದು. ರಾತ್ರಿ 8.30 ಕ್ಕೆ ಗೋವಾದಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತಾಯಿ ಮಗಳ ಮೃತದೇಹ ಬರಲಿವೆ.