ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸ್ಪ್ರಿಂಟ್ ಕ್ವೀನ್ ದ್ಯುತಿ ಚಂದ್ ನಿಷೇಧಿತ ಡ್ರಗ್ ಸೇವನೆ ಮಾಡಿರುವುದು ದೃಢಪಟ್ಟಿದ್ದು, ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ.
ಸ್ಟಾರ್ ಓಟಗಾರ್ತಿ ದ್ಯುತಿ ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಕೆರಿಯರ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಎರಡು ವರ್ಷದ ಹಿಂದೆ ದ್ಯುತಿ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಷ್೪ರ ಸಮಯದಲ್ಲಿ 11.17 ಸೆಕೆಂಡ್‌ಗಳಲ್ಲಿ 100 ಮೀಟರ್ ಓಡಿ ನೂತನ ದಾಖಲೆ ನಿರ್ಮಿಸಿದ್ದರು.
ದ್ಯುತಿ ಅವರ ಮೂತ್ರದ ಪರೀಕ್ಷೆ ವರದಿಯಲ್ಲಿ ನಿಷೇಧಿತ ಡ್ರಗ್ಸ್ ಸೇವನೆ ದೃಢಪಟ್ಟಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದ್ಯುತಿ ಫಿಸಿಯೋಥೆರಪಿಸ್ಟ್ ಸೂಚಿಸಿದ್ದ ಔಷಧಗಳನ್ನು ಸೇವಿಸಿದ್ದಾರೆ, ಅಲ್ಲದೆ ಸೇವನೆಗೂ ಮುನ್ನ ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ.