spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮತ್ತೆ `ಡ್ರಿಂಕ್ ಆ್ಯಂಡ್ ಡ್ರೈವ್’ ಟೆಸ್ಟ್ ಆರಂಭ: ಕುಡಿದು ವಾಹನ ಚಲಾಯಿಸುವವರಿಗೆ ತಟ್ಟಲಿದೆ ದಂಡದ ಬಿಸಿ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಒಂದೂವರೆ ವರ್ಷದ ಬಳಿಕ ಮತ್ತೆ ಟ್ರಾಫಿಕ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಆರಂಭಿಸಲು ಮುಂದಾಗಿದ್ದಾರೆ.

ಹೌದು.. ಕೋವಿಡ್ ಹಿನ್ನೆಲೆ ಕಳೆದ ಒಂದೂವರೆ ವರ್ಷದಿಂದ ಡ್ರಿಂಕ್ ಆ್ಯಂಡ್ ಡ್ರೈವ್ ಪರೀಕ್ಷೆ ನಿಲ್ಲಿಸಲಾಗಿತ್ತು. ಆದರೆ   ಬೆಂಗಳೂರಿನಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅನೇಕ ಅಪಘಾತಗಳಿಗೆ ಕುಡಿದು ವಾಹನ ಚಲಾಯಿಸುತ್ತಿರುವುದು ಕಾರಣವಾಗಿದೆ. ಹಾಗಾಗಿ ಮತ್ತೆ ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ವಾರದಲ್ಲಿ 3 ದಿನ ಡ್ರಿಂಕ್‌ ಅಂಡ್ ಡ್ರೈವ್ ಚೆಕ್ ಮಾಡುವಂತೆ ಆದೇಶ ಹೊರಡಿಸಲಾಗಿದ್ದು, ವಾರಾಂತ್ಯದಲ್ಲಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಭಾರೀ ದಂಡ ಬೀಳಲಿದೆ.

ವಾರಾಂತ್ಯದಲ್ಲಿ ರಾತ್ರಿ 9 ರಿಂದ ಟ್ರಾಫಿಕ್ ಪೊಲೀಸರು ಫೀಲ್ಡಿಗೆ ಇಳಿಯಲಿದ್ದು, ಕುಡಿದು ವಾಹನ ಚಲಾಯಿಸುವವರ ಮೇಲೆ ದಂಡ ಮಾತ್ರವಲ್ಲದೆ, ಕಾನೂನು ಕ್ರಮವನ್ನೂ ತೆಗೆದುಕೊಳ್ಳುವ ಸಾಧ್ಯತೆ ಇದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss