Monday, August 15, 2022

Latest Posts

ರಾಜ್ಯ ರಾಜಧಾನಿ ಪ್ರತಿಭಟನೆಯ ಕಾವು: ಮೌರ್ಯ ಸರ್ಕಲ್​​-ಆರ್​. ಸರ್ಕಲ್​ವರೆಗೆ ಫುಲ್ ಟ್ರಾಫಿಕ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ಜೋರಾಗಿ ನಡೆದಿದ್ದು, ಫ್ರೀಡಂ ಪಾರ್ಕ್​ನ ಸುತ್ತ ಮುತ್ತ ಭಾರೀ ಜನ ಜಮಾವಣೆಗೊಂಡಿದ ಪರಿಣಾಮ ಮೌರ್ಯ ಸರ್ಕಲ್​​ನಿಂದ ಕೆ. ಆರ್​. ಸರ್ಕಲ್​ವರೆಗೆ ಸಂಪೂರ್ಣ ಟ್ರಾಫಿಕ್​​ ಜಾಮ್​ ಆಗಿದೆ.
ಒಂದೆಡೆ ಪ್ರತಿಭಟನೆಗಳು ಮತ್ತೊಂದೆಡೆ ರಸ್ತೆ ದುರಸ್ತಿ ಕಾಮಗಾರಿ ಕಾರಣದಿಂದಾಗಿ ಫುಲ್​ ಟ್ರಾಫಿಕ್​ ಜಾಮ್​ ಉಂಟಾಗಿದೆ. ಈ ಟ್ರಾಫಿಕ್​ನಲ್ಲಿ ಸಿಕ್ಕಿಹಾಕಿಕೊಂಡ ಆಯಂಬ್ಯುಲೆನ್ಸ್​ಗಳು​ ಕೂಡಾ ಹೊರಬರಲಾಗದೆ ಪರದಾಡುವಂತಾಗಿದೆ.
ಇನ್ನು ವಾಹನ ಸವಾರರ ಗೋಳಂತೂ ಹೇಳೋದೇ ಬೇಡ, ಒಂದೆಡೆ ಬಿಸಿಲಿನ ಬೇಗೆ, ಇನ್ನೊಂದೆಡೆ ಟ್ರಾಫಿಕ್​ ಜಾಮ್ . ಇದರ ನಡುವೆ ಸಿಲುಕಿದ ಸವಾರರು ಸಂಪೂರ್ಣ ಹೈರಾಣಾಗಿದ್ದು, ಟ್ರಾಫಿಕ್​ನಿಂದ ಹೊರಬರಲಾಗದೆ ಗಂಟೆಗಟ್ಟಲೆ ನಿಂತಲ್ಲೇ ನಿಲ್ಲೋ ಪರಿಸ್ಥಿತಿ ಉಂಟಾಗಿದೆ.
ಮೈಸೂರು ಬ್ಯಾಂಕ್​ ಸೆಂಟ್ರಲ್​ ಕಾಲೇಜು ಮುಂಭಾಗ ಒನ್​ ವೇ ವ್ಯವಸ್ಥೆ ಉಂಟಾಗಿದ್ದು, ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಕೆ. ಆರ್.​ ಸರ್ಕಲ್ ಬಳಸಿ ಸಾಗಬೇಕಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss