Thursday, June 1, 2023

Latest Posts

ರಾಜ್ಯ ಚುನಾವಣೆ: ಭಟ್ಕಳದ ಮೂವರು ಗಡಿಪಾರು

ಹೊಸದಿಗಂತ ವರದಿ,ಭಟ್ಕಳ:

ವಿಧಾನಸಭಾ ಚುನಾವಣೆ ಮುಕ್ತಾಯಗೊಳ್ಳುವವರೆಗೆ  ಭಟ್ಕಳ ಹಾಗೂ ಮುರುಡೇಶ್ವರದಿಂದ ಮೂವರನ್ನು ಗಡಿಪಾರು ಮಾಡಲಾಗಿರುವ ಬಗ್ಗೆ ಚುನಾವಣೆ ಅಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ಆದೇಶ ಹೊರಡಿಸಿದ್ದಾರೆ.

ಗಡಿಪಾರಾದವರನ್ನು ಮೊಹಮ್ಮದ್ ಇಫ್ಜಾಲ್  ಅಬ್ದುಲ್ ವದೂದ್ ಖಾಜಿ, ನ್ಯಾಶನಲ್ ಕಾಲೋನಿ ಮುರ್ಡೇಶ್ವರ(11 ಪ್ರಕರಣ) ಶಂಕರ್ ಸಂಕಪ್ಪ ನಾಯ್ಕ ಪಗಡಿಮನೆ ಕೆಬಿ ರಸ್ತೆ ಚೌಥನಿ (20 ಪ್ರಕರಣ) ಅಬ್ದುಲ್ ರೆಹಮಾನ ಶಬ್ಬೀರ ವಾಡ್ಕರ್ ಬದ್ರಿಯಾ ಕಾಲೋನಿ (9 ಪ್ರಕರಣ) ಈ ಮೂವರನ್ನು ಉತ್ತರಕನ್ನಡ ಜಿಲ್ಲೆಯಿಂದ ವಿಧಾನಸಭೆ ಚುನಾವಣೆ ಮುಗಿಯುವವರೆಗಿನ ಅವಧಿಗೆ ಬಳ್ಳಾರಿ ಜಿಲ್ಲೆಯ ಪರಮದೇವನಹಳ್ಳಿ (ಪಿ.ಡಿ. ಹಳ್ಳಿ) ಪೋಲಿಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಮಮತಾದೇವಿ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!