ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳಾದ ಎಸ್.ಸಂಗೀತಾ-ಎಸ್‌ಪಿ,ಯಾದಗಿರಿ, ಲೋಕೇಶ್ ಬಿ.ಜಗಲಸರ್-ನಿರ್ದೇಶಕ ಪೊಲೀಸ್ ಅಕಾಡೆಮಿ (ಮೈಸೂರು) ಮತ್ತು ಗೋಪಾಲ್ ಎಂ.ಬೈಕೋಡ್-ಎಸ್‌ಪಿಯಾಗಿ ವಿವಿಧ ಸ್ಥಳಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.