ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯವು ಸಾವಿನ ಮನೆಯಾಗಿದೆ. ಆದ್ರೆ ಸರ್ಕಾರ ಡಿನ್ನರ್ ಪಾಲಿಟಿಕ್ಸ್‌ದ್ದೇ ಚಿಂತೆಯಾಗಿದೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಾವಿನ ಮನೆಯಂತಾಗಿದೆ. 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ತಜ್ಞರ ಸಮಿತಿ ರಚನೆಯಾಗಿದ್ದರೂ ಬಾಣಂತಿಯರು, ಹಸುಗೂಸುಗಳ ಸಾವಿಗೆ ಕಾರಣವೇನೆಂದು ತಿಳಿದಿಲ್ಲ ಎಂದರು.
ಇಂತಹ ಸಂದರ್ಭದಲ್ಲಿ ಡಿನ್ನರ್ ಮೀಟಿಂಗ್ ಅಲ್ಲ, ಸಾವಿಗೆ ಕಾರಣವಾದ ಸಂಬಂಧ ಉನ್ನತ ಮೀಟಿಂಗ್ ಮಾಡಬೇಕಿತ್ತು. ಸಾವಿಗೆ ಕಾರಣ ಆಸ್ಪತ್ರೆಯೋ, ವೈದ್ಯರೋ, ಔಷಧಿಯೋ ಏನು ಎಂದು ತಿಳಿಯಬೇಕಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಸಂವೇದನೆ ಇಲ್ಲದಂತಾಗಿದೆ. ಕಲ್ಲು ಹೃದಯ, ಹೃದಯ ಹೀನರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.