Tuesday, June 28, 2022

Latest Posts

ರಾಜ್ಯ ಮಟ್ಟದ 36ನೇ ಪತ್ರಕರ್ತರ ಸಮ್ಮೇಳನ: ಯಶಸ್ವಿಗಾಗಿ ಪೂರ್ವಭಾವಿ ಸಭೆ

ಹೊಸದಿಗಂತ ವರದಿ, ಕಲಬುರಗಿ:

ಕನಾ೯ಟಕ ಕಾಯ೯ನಿರತ ಪತ್ರಕರ್ತರ ಸಂಘ,ದ 36ನೇ ರಾಜ್ಯ ಮಟ್ಟದ ಸಮ್ಮೇಳನವನ್ನು ಯಶಸ್ಸು ಗೊಳಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎಂದು ಪತ್ರಕರ್ತರ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಮಧ್ಯಾಹ್ನ ೩೬ ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಕುರಿತು ಸಿದ್ಧತೆಗಳ ಬಗ್ಗೆ ಸಂಘದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮ್ಮೇಳನದ ಉಪ ಸಮಿತಿಯ ಸದಸ್ಯರುಗಳ ಸಭೆ ಜರುಗಿತು.
ಸಮ್ಮೇಳನಕ್ಕೆ 104 ಗಂಟೆಗಳು ಮಾತ್ರ ಉಳಿದಿದ್ದು, ಶಕ್ತಿಮೀರಿ ಶ್ರಮಿಸಬೇಕೆಂದು ಹೇಳಿದರು. ಅಮೂಲ್ಯವಾದ ಸಲಹೆ ಸೂಚನೆ ನೀಡಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಲಹೆ ಸೂಚನೆ ನೀಡಿದರು.
ವೇದಿಕೆ ಮೇಲೆ ರಾಜ್ಯ ಸಮಿತಿ ಸದಸ್ಯರಾದ ದೇವಿಂದ್ರಪ್ಪ ಕಪನೂರ, ಹಣಮಂತರಾವ ಭೈರಾಮಡಗಿ, ಸಹ ಕಾರ್ಯದರ್ಶಿ ರಮೇಶ ಖಮಿತಕರ್, ನಗರ ಉಪಾಧ್ಯಕ್ಷ ಶ್ಯಾಮ ಸಿಂಧೆ, ಖಜಾಂಚಿ ರಾಜು ದೇಶಮುಖ, ಬೆಂಗಳೂರಿನ ನಗರ ಕಾರ್ಯದರ್ಶಿ ದೇವರಾಜ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು ಭಾಗವಹಿಸಿದರು.
ಕಲಬುರಗಿ ಜಿಲ್ಲಾಧ್ಯಕ್ಷ ಭವಾನಿ ಸಿಂಗ್ ಠಾಕೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ನಿರೂಪಿಸಿದರು. ಗೋಪಿ ಕುಲಕರ್ಣಿ ಪ್ರಾರ್ಥಿಸಿದರು.
ಉಪಸಮಿತಿಗಳ ವಿವರ
ಸ್ವಾಗತ, ಸಾರಿಗೆ, ವಸತಿ, ಆಹಾರ, ಲೆಕ್ಕ ಪತ್ರ, ಮುದ್ರಣ, ಸ್ಮರಣ ಸಂಚಿಕೆ, ಪ್ರಚಾರ, ಸಾಂಸ್ಕೃತಿಕ ನಿರ್ವಹಣೆ, ಅತಿಥಿ ಸತ್ಕಾರ, ಮಹಿಳಾ, ಛಾಯಾಚಿತ್ರ ಮತ್ತು ವಸ್ತು ಪ್ರದರ್ಶನ, ಸ್ವಯಂ ಸೇವಕರ ಸಮಿತಿ, ವೇದಿಕೆ ಅಲಂಕಾರ ಸಮಿತಿ, ಪ್ರತಿನಿಧಿಗಳ ನೋಂದಣಿ ಸೇರಿದಂತೆ ೨೦ ಕ್ಕೂ ಹೆಚ್ಚು ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss