Sunday, June 26, 2022

Latest Posts

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ

ಹೊಸದಿಗಂತ ವರದಿ, ಶಿವಮೊಗ್ಗ:

ವೈಜ್ಞಾನಿಕ ಕ್ಷೇತ್ರದಲ್ಲಿ ಆಗುತ್ತಿರುವ ಮಹತ್ತರ ಆವಿಷ್ಕಾರಗಳು ಅಭಿವೃದ್ಧಿಗೆ ಪೂರಕ ಆಗಿದ್ದರೂ ಕೆಲವು ಸಂದರ್ಭದಲ್ಲಿ ವೈಯಕ್ತಿಕ ಉದ್ದೇಶಕ್ಕೂ ಬಳಕೆ ಆಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನದ ಸರ್ವಾಧ್ಯಕ್ಷ, ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯ ತನ್ನಲ್ಲಿನ ಅಸಾಧಾರಣ ಶಕ್ತಿಯಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಅಪರಿಮಿತ ಆವಿಷ್ಕಾರ ನಡೆಸುತ್ತಿದ್ದಾನೆ. ಸಮಾಜಮುಖಿಯಾಗುವ ರೀತಿಯಲ್ಲಿ ವೈಜ್ಞಾನಿಕ ಆವಿಷ್ಕಾರಗಳ ಉಪಯೋಗವಾಗಬೇಕಿದೆ. ಇಂದಿನ ಸಂಶೋಧನೆಗಳು ಎಷ್ಟರ ಮಟ್ಟಿಗೆ ಆಗಿದೆ ಎಂದರೆ, ಜರ್ಮನಿಯಲ್ಲಿ ಪ್ರೊಫೆಸರ್ ಒಬ್ಬರು ತನ್ನಂತೇ ಹೋಲುವ ರೋಬೋಟ್ ನಿರ್ಮಿಸಿಕೊಂಡಿದ್ದಾರೆ. ಅವರು ತರಗತಿ ಹೊರಗಡೆ ಇದ್ದರೆ, ರೋಬೋಟ್ ಪಾಠ ಮಾಡುತ್ತಿರುತ್ತದೆ ಎಂದು ತಿಳಿಸಿದರು.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಕುಂ.ವೀರಭದ್ರಪ್ಪ, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಗೌರವ ಅಧ್ಯಕ್ಷ ಎಸ್.ಕೆ.ಉಮೇಶ್, ಲೋಕೇಶ್ವರ್, ದಾನಿ ಬಾಬುರಾವ್, ವಿ.ಟಿ.ಸ್ವಾಮಿ, ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ರಾಜೇಂದ್ರ ಆವಿನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ವೈಜ್ಞಾ ನಿಕ ಸಂಶೋಧನಾ ಪರಿಷತ್‌ನ ವಿಜ್ಞಾ ನಿ ಸಿರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಪರಿಷತ್‌ನ ಆನ್‌ಲೈನ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪರಿಷತ್‌ನ 2022ರ ದಿನಚರಿ ಬಿಡುಗಡೆಗೊಳಿಸಲಾಯಿತು. ವಿಜ್ಞಾನ ಗ್ರಾಮ ಯೋಜನೆ ಕುರಿತ ವಿಡಿಯೋ ಪ್ರದರ್ಶಿಸಲಾಯಿತು. ಪರಿಷತ್ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು.
ಹಿರಿಯ ರಂಗಕರ್ಮಿ ದೊಡ್ಡಣ್ಣ, ಸಮಾಜ ಸೇವಕರಾದ ಡಾ. ಶ್ರೀಧರ್ ಕುಮಾರ್, ಪದ್ಮನಾಭಗೌಡ, ನಂದಿನಿ ಮೋಹನ್ ಕುಮಾರ್, ವೈದ್ಯ ಡಾ. ಟಿ.ಎಚ್.ಆಂಜಿನಪ್ಪ, ಡಾ. ಶ್ರೀರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss